ಪ್ಯಾರಿಸ್:ಪ್ಯಾರಿಸ್ನಲ್ಲಿ ಪ್ರವಾಸೋದ್ಯಮ ಮತ್ತೆ ಆರಂಭವಾಗುತ್ತಿದೆ. ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ, ವಿಶ್ವವಿಖ್ಯಾತ ಐಫೆಲ್ ಟವರ್ ಪ್ರವಾಸಿಗರಿಗಾಗಿ ಮತ್ತೆ ಸಜ್ಜುಗೊಳ್ಳುತ್ತಿದೆ.
ವಿಶ್ವವಿಖ್ಯಾತ ಐಫೆಲ್ ಟವರ್ ಜೂನ್ 25 ರಿಂದ 324 ಮೀಟರ್ ಎತ್ತರದ ಐಫೆಲ್ ಟವರ್ ಪ್ರವಾಸಿಗರಿಗೆ ಮತ್ತೆ ತೆರೆಯಲಿದೆ. ಸೀಮಿತ ಸಂಖ್ಯೆಯ ಪ್ರವಾಸಿಗರಿಗೆ ಮಾತ್ರ ಅವಕಾಶವಿರುತ್ತದೆ. ಯಾವುದೇ ಎಲಿವೇಟರ್ ಸೇವೆಗಳು ಇರುವುದಿಲ್ಲ. ಟವರ್ನ ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಇರಲಿದೆ.
"ಟವರ್ ಒಳಗೆ ಮೆಟ್ಟಿಲುಗಳ ಮೂಲಕ ಹೋಗಲು ಅವಕಾಶ ಕಲ್ಪಿಸಲಾಗಿದೆ" ಎಂದು ಗೋಪುರದ ನಿರ್ವಹಣೆಯ ವಕ್ತಾರ ವಿಕ್ಟೋರಿಯಾ ಕ್ಲಾರ್ ಹೇಳಿದ್ದಾರೆ.
ವಿಶ್ವವಿಖ್ಯಾತ ಐಫೆಲ್ ಟವರ್ ಹನ್ನೊಂದು ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಫೇಸ್ ಮಾಸ್ಕ್ ಧರಿಸಬೇಕು. ಜನಸಂದಣಿ ನಿಯಂತ್ರಣ ಕ್ರಮಗಳು ಜಾರಿಯಲ್ಲಿರುತ್ತವೆ. "ಹೊಸ ಪ್ರೋಟೋಕಾಲ್ ಇದೆ" ಎಂದು ಐಫೆಲ್ ಟವರ್ ನೈರ್ಮಲ್ಯ ವಿಭಾಗದ ಸಲಹೆಗಾರ ಅಲೈನ್ ಮಿರಲ್ಲೆಸ್ ಹೇಳಿದ್ದಾರೆ.
ಪ್ರವಾಸಿಗರು ಭೇಟಿ ನೀಡಲು ಟಿಕೆಟ್ನನ್ನು ಆನ್ಲೈನ್ ಮೂಲಕ ಕಾಯ್ದಿರಿಸಬಹುದಾಗಿದೆ. ಗುರುವಾರದಿಂದ ಟಿಕೆಟ್ ಕೌಂಟರ್ಗಳು ತೆರೆಯಲಿವೆ.