ಕರ್ನಾಟಕ

karnataka

ETV Bharat / international

ನಮ್ಮ ಸ್ನೇಹಿತರೊಂದಿಗೆ ನಾವಿದ್ದೇವೆ: ಭಾರತದ ಕೋವಿಡ್​ ಹೋರಾಟಕ್ಕೆ ಕೈ ಜೋಡಿಸಿದ ಆಸ್ಟ್ರೇಲಿಯಾ!

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇದೀಗ ಭಾರತಕ್ಕೆ ಸಹಾಯ ಮಾಡಲು ಅನೇಕ ದೇಶಗಳು ಮುಂದೆ ಬರುತ್ತಿವೆ.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್

By

Published : Apr 24, 2021, 4:01 PM IST

ಮೆಲ್ಬೋರ್ನ್​:ಎರಡನೇ ಹಂತದ ಕೋವಿಡ್ ಅಲೆಗೆ ಭಾರತ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಪ್ರತಿವೊಂದು ರಾಜ್ಯದಲ್ಲಿ ಪ್ರತಿದಿನ ಸಾವಿರಾರು ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಕೋವಿಡ್ ಮಹಾಮಾರಿ ಹೆಚ್ಚಾಗಿರುವ ಕಾರಣ ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ಆಕ್ಸಿಜನ್​, ಬೆಡ್​, ಔಷಧ ಕೊರತೆ ಉಂಟಾಗಿದೆ. ಇದೀಗ ಭಾರತದ ಬೆಂಬಲಕ್ಕೆ ಅನೇಕ ದೇಶಗಳು ಬರುತ್ತಿವೆ. ಎರಡನೇ ಹಂತದ ಕೋವಿಡ್​ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್ ಹೇಳಿದ್ದಾರೆ.

ಭಾರತೀಯರು ಎಷ್ಟು ಪ್ರಬಲರು ಮತ್ತು ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದು ನಮಗೆ ತಿಳಿದಿದೆ. ಈ ಜಾಗತಿಕ ಸವಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ನಾವು ಕೆಲಸ ಮಾಡಲು ಮುಂದಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಬ್ರಿಟನ್​, ಯುಎಸ್​, ಚೀನಾ ಹಾಗೂ ಪಾಕ್​ ಕೂಡ ಭಾರತದೊಂದಿಗೆ ಕೋವಿಡ್ ಹೋರಾಟದಲ್ಲಿ ಭಾಗಿಯಾಗುವುದಾಗಿ ಹೇಳಿಕೊಂಡಿವೆ.

ಇದನ್ನೂ ಓದಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇನೆ ಎಂದ ಪಾಕ್​!

ABOUT THE AUTHOR

...view details