ಕರ್ನಾಟಕ

karnataka

ETV Bharat / international

ಕೊರೊನಾ ವೈರಸ್​ ಮೂಲದ ತನಿಖೆಗೆ ಗುರುವಾರ ಚೀನಾಕ್ಕೆ ಬರಲಿದ್ದಾರೆ WHO ತಜ್ಞರು

ವಿಶ್ವ ಆರೋಗ್ಯ ಸಂಸ್ಥೆ ತಜ್ಞರ ಭೇಟಿಗೆ ನಮ್ಮ ದೇಶವು ಮುಕ್ತವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

WHO experts arriving on Thursday for virus origins probe
ಕೊರೊನಾ ವೈರಸ್​ ಮೂಲದ ತನಿಖೆಗೆ ಗುರುವಾರ ಚೀನಾಗೆ ಬರಲಿದ್ದಾರೆ WHO ತಜ್ಞರು

By

Published : Jan 11, 2021, 1:13 PM IST

ಬೀಜಿಂಗ್:ಜಗತ್ತನ್ನೇ ಸಂಕಷ್ಟಕ್ಕೆ ನೂಕಿದ ಕೊರೊನಾ ವೈರಸ್​ನ ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ (WHO)ಯ ತಜ್ಞರ ತಂಡ ಗುರುವಾರ ಚೀನಾಕ್ಕೆ ಬರಲಿದೆ ಎಂದು ಚೀನಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವಾರ ತನಿಖೆ ನಡೆಸಲು ಡಬ್ಲ್ಯೂಹೆಚ್​ಒ ಎರಡು ತಂಡವನ್ನು ಚೀನಾಗೆ ಕಳಿಸಲು ಮುಂದಾಗಿತ್ತು. ಆದರೆ ಇದಕ್ಕೆ ಚೀನಾ ನಿರಾಕರಿಸಿತ್ತು. ಚೀನಾ ನಿರ್ಬಂಧಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರಿಯೇಸಸ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಚರಿತ್ರೆಯಲ್ಲೇ ಆತ ಕೆಟ್ಟ ಅಧ್ಯಕ್ಷನಾಗಿ ಉಳಿಯಲಿದ್ದಾರೆ: ಟ್ರಂಪ್​ ಮೇಲೆ ಬುಲೆಟ್​ನಂತೆ ವಾಗ್ದಾಳಿ ನಡೆಸಿದ ಅರ್ನಾಲ್ಡ್

ಟೆಡ್ರೋಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ , ಕಳೆದ ಎರಡು ವಾರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಚೀನಾದ ಆರೋಗ್ಯ ತಜ್ಞರು ಕಾರ್ಯನಿರತರಾಗಿದ್ದಾರೆ. ಇದೀಗ ನಮ್ಮ ದೇಶವು ಭೇಟಿಗೆ ಮುಕ್ತವಾಗಿದೆ. ಸಾಂಕ್ರಾಮಿಕ ರೋಗನ್ನು ನಿಯಂತ್ರಿಸುವ ಯುದ್ಧದಲ್ಲಿ ನಮ್ಮ ತಜ್ಞರು ಸೇವೆ ಸಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.

2019ರ ಡಿಸೆಂಬರ್​ನಲ್ಲಿ ಚೀನಾದ ವುಹಾನ್​​ ಪ್ರಾಂತ್ಯದಲ್ಲಿ ಮೊಟ್ಟ ಮೊದಲ ಕೋವಿಡ್​ ಪ್ರಕರಣ ಪತ್ತೆಯಾಗಿತ್ತು. ಮೊದಲ ದಿನ ಅಂದರೆ ಗುರುವಾರವೇ ತಜ್ಞರ ತಂಡ ಕೊರೊನಾ ಕೇಂದ್ರ ಬಿಂದು ವುಹಾನ್​ಗೆ ಭೇಟಿ ನೀಡಲಿದೆಯಾ ಎಂಬುದರ ಬಗ್ಗೆ ಸ್ಪಷ್ಟನೆಯಿಲ್ಲ.

ABOUT THE AUTHOR

...view details