ಕೊಲಂಬೊ:ಕೋವಿಡ್ ಭೀತಿಯ ನಡುವೆಯೇ ಶ್ರೀಲಂಕಾದ ಸಂಸತ್ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ಬಾರಿ ಪ್ರಬಲ ಮತ್ತು ಜನಪ್ರಿಯ ರಾಜಪಕ್ಸೆ ಸಹೋದರರಿಗೆ ಅಧಿಕಾರ ಸಿಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಚರ್ಚ್ ಗಳ ಮೇಲಿನ ದಾಳಿಯಲ್ಲಿ ಸುಮಾರು 269 ಜನರು ಸಾವನ್ನಪ್ಪಿದ್ದರು. ಇದಾದ ನಂತರ ದೇಶವನ್ನು ಕಾಪಾಡುವ ಏಕೈಕ ನಾಯಕನೆಂದು ಬಿಂಬಿಸಿಕೊಂಡ ಗೋತಬಯಾ ರಾಜಪಕ್ಸೆ ಕಳೆದ ನವೆಂಬರ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು
ಇದೀಗ ಇವರ ಅಣ್ಣ, ವರ್ಚಸ್ವಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಪ್ರಧಾನಮಂತ್ರಿಯಾಗಿ ಮತ್ತೆ ಅಧಿಕಾರಕ್ಕ ಬರಲು ಕಸರತ್ತು ನಡೆಸಿದ್ದಾರೆ. 225 ಸ್ಥಾನಗಳ ಸಂಸತ್ಗೆ ಇಂದು ಚುನಾವಣೆ ನಡೆಯುತ್ತಿದೆ.
196 ಸಂಸದರನ್ನು ಆಯ್ಕೆ ಮಾಡಲು 16 ದಶಲಕ್ಷಕ್ಕೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದು, ಉಳಿದವರನ್ನು ಪ್ರತಿಪಕ್ಷ ಅಥವಾ ಸ್ವತಂತ್ರ ಗುಂಪುಗಳು ಮತದಾನ ಮಾಡುವ ಮೂಲಕ ಆಯ್ಕೆ ಮಾಡಲಿದ್ದಾರೆ.