ಕಾಬೂಲ್: 30 ವರ್ಷದ ಅಲಿ ಅಟಾಯೀ ಆಫ್ಘಾನ್ ನಿರಾಶ್ರಿತ ಯುವಕ ಇರಾನ್‌ನಲ್ಲಿ ಬೆಳೆದು ತನ್ನ ಮೊದಲ ಕಂಪ್ಯೂಟರ್ ತರಗತಿಗೆ ಸೇರಿಕೊಂಡಾಗ, ಅವನು ತನ್ನ ವಯಸ್ಕ ಜೀವನದಲ್ಲಿ ಇದೇ ವಿಷಯವನ್ನು ವೃತ್ತಿಯನ್ನಾಗಿ ಮಾಡಿಕೊಂಡು ಮುಂದುವರಿಯಲು ಬಯಸುತ್ತಾನೆಂದು ಅವನಿಗೆ ತಿಳಿದಿತ್ತು.
ಹಲವು ವರ್ಷಗಳ ಬಳಿಕ ಅಫ್ಘಾನಿಸ್ತಾನಕ್ಕೆ ವಾಪಾಸ್ ಆದಾಗ ಒಂದು ಗುರಿಯನ್ನು ಗಮನದಲ್ಲಿಟ್ಟುಕೊಂಡಿದ್ದ ಅಟಾಯೀ. ತನ್ನ ಎಲ್ಲಾ ಶಕ್ತಿ, ಸಮಯ ಮತ್ತು ಸಂಪನ್ಮೂಲಗಳಿಂದ ಕಂಪ್ಯೂಟರ್ ಸೈನ್ಸ್ ಕಲಿತಿದ್ದನು. ವಿಶೇಷವಾಗಿ ವೆಬ್ ಅಭಿವೃದ್ಧಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದನು.
ಕಾಬೂಲ್‌ನ ಪ್ರತಿಷ್ಠಿತ ಅಮೆರಿಕನ್ ಯೂನಿವರ್ಸಿಟಿ ಆಫ್ ಅಫ್ಘಾನಿಸ್ತಾನದಲ್ಲಿ ಪದವೀಧರರಾದ ಅಟಾಯೀ, ಈಗಾಗಲೇ ಅಭಿವೃದ್ಧಿ ಹೊಂದಿದ್ದ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ್ದನು. ಕೆಲ ಸಣ್ಣ ಅಭಿವೃದ್ಧಿ ಪ್ರಾಜೆಕ್ಟ್‌ಗಳನ್ನು ಮಾಡಿದ್ದ. ಕಳೆದ 2 ವರ್ಷಗಳಿಂದ ಅಟಾಯೀ, ಸ್ಥಳೀಯ ಕಂಪನಿಗಳಿಗೆ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾನೆ.
ನಾನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಗ್ಗೆ ಉತ್ಸಾಹವನ್ನು ಹೊಂದಿದ್ದೆ. ಆದರೆ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹೇಗೆ ಸುಧಾರಿಸುತ್ತಿದೆ ಎಂದು ನೋಡಿದಾಗ, ತಾನು ಪದವಿ ಪಡೆಯುವ ಹೊತ್ತಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮತ್ತು ಅವಕಾಶಗಳಿವೆ ಎಂದು ಊಹಿಸಿದ್ದೆ ಎಂದು ಹೇಳಿದ್ದಾನೆ. ಹೆಚ್ಚು ಹೆಚ್ಚು ಆಫ್ಘನ್ನರು ಆನ್‌ಲೈನ್‌ಗೆ ಬಂದ್ದು, 2021ರ ಅಂತ್ಯದ ವೇಳೆಗೆ 12.8 ಮಿಲಿಯನ್ ಮಂದಿ ಇಂಟರ್‌ನೆಟ್ ಬಳಕೆ ದಾರರಾಗಲಿದ್ದಾರೆ ಎಂದು ಹೇಳಿದ್ದಾರೆ.
2012 ರಲ್ಲಿ ಯುಎಸ್ಐಐಡಿ ವರದಿಯ ಪ್ರಕಾರ, ದೂರಸಂಪರ್ಕ ಕ್ಷೇತ್ರವು ಅಫ್ಘಾನಿಸ್ತಾನದಲ್ಲಿ ವಾರ್ಷಿಕ ಸರಾಸರಿ 139.6 ಮಿಲಿಯನ್ ಡಾಲರ್ ಆದಾಯವನ್ನು ಹೊಂದಿರುವ ಅತಿದೊಡ್ಡ ಆದಾಯ ತಂದು ಕೊಡುವ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಒಟ್ಟು ಸರ್ಕಾರದ ಆದಾಯದ ಶೇಕಡಾ 12 ಕ್ಕಿಂತ ಹೆಚ್ಚಾಗಿದೆ. ಅಫ್ಘಾನಿಸ್ತಾನದ ಐಟಿ ವಲಯವನ್ನು ಅನೇಕ ತಜ್ಞರು ಯುದ್ಧ-ಹಾನಿಗೊಳಗಾದ ರಾಷ್ಟ್ರದ ಕೆಲವೇ ಯಶಸ್ಸಿನ ಕಥೆಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ.