ಕಾಬೂಲ್(ಆಫ್ಘಾನಿಸ್ತಾನ್):ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸೃಷ್ಟಿಸಿರುವ ಅರಾಜಕತೆಯಿಂದ ಬೇಸತ್ತಿರುವ ಅಲ್ಲಿನ ನಿವಾಸಿಗಳು ದೇಶ ತೊರೆಯುವ ಧಾವಂತದಲ್ಲಿದ್ದಾರೆ. ಇದರ ನಡುವೆ ಅಮೆರಿಕ, ಬ್ರಿಟನ್, ಕೆನಡಾ ಸೇರಿದಂತೆ ವಿವಿಧ ದೇಶಗಳು ತಮ್ಮ ಜನರ ಏರ್‌ಲಿಫ್ಟ್ ಕಾರ್ಯದ ಕೊನೆಯ ಹಂತ ತಲುಪಿದ್ದು, 20 ವರ್ಷಗಳಿಂದ ಅಫ್ಘಾನಿಸ್ತಾನಕ್ಕೆ ನೀಡಿದ್ದ ಬೆಂಬಲಕ್ಕೆ ಈ ಮಿತ್ರ ರಾಷ್ಟ್ರಗಳು ಅಂತ್ಯ ಹಾಡಿವೆ.
ಇದೇ ವೇಳೆ, ಅನೇಕ ನಾಗರಿಕರು ಹಾಗೂ ಹಲವು ವರ್ಷಗಳಿಂದ ಸಹಾಯ ಮಾಡಿದ ಸ್ಥಳೀಯ ನಿವಾಸಿಗಳನ್ನು ಬಿಟ್ಟು ಹೋಗುತ್ತಿರುವುದನ್ನು ಈ ದೇಶಗಳ ನಾಯಕರು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ತಾಲಿಬಾನಿಗಳು ನಿನ್ನೆ ಕಾಬೂಲ್ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಆಗಸ್ಟ್ 31ರ ಗಡುವನ್ನು ಅಮೆರಿಕ ಅಧ್ಯಕ್ಷ ಬೈಡನ್ ವಾಪಸ್ ಪಡೆದಿದ್ದು, ಮತ್ತೊಂದೆಡೆ, ಇತರೆ ರಾಷ್ಟ್ರಗಳ ಪ್ರಜೆಗಳು ಇಲ್ಲಿಂದ ಸ್ಥಳಾಂತರ ಆಗುವವರೆಗೆ ತಾಲಿಬಾನಿಗಳ ಜೊತೆ ಕೆಲಸ ಮಾಡುವುದಾಗಿ ಪಾಶ್ಚಿಮಾತ್ಯ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ 4 ತಿಂಗಳಲ್ಲಿ ಅಫ್ಘಾನಿಸ್ತಾನದಿಂದ 5 ಲಕ್ಷ ಮಂದಿ ವಲಸೆ ಸಾಧ್ಯತೆ: UNHCR