ಕರ್ನಾಟಕ

karnataka

ETV Bharat / international

ಶೀಘ್ರದಲ್ಲೇ ವಿಶ್ವವು ತಾಲಿಬಾನ್ ಗುರುತಿಸಲಿದೆ: ಜಬೀವುಲ್ಲಾ ಮುಜಾಹಿದ್ ವಿಶ್ವಾಸ - ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ಸರ್ಕಾರಕ್ಕೆ ಮಾನ್ಯತೆ ನೀಡುವಂತೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಇಡೀ ಜಗತ್ತು ನಮ್ಮನ್ನು ಗುರುತಿಸಲಿದೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.

Taliban
Taliban

By

Published : Sep 27, 2021, 11:07 AM IST

Updated : Sep 27, 2021, 11:57 AM IST

ಕಾಬೂಲ್​ (ಅಫ್ಘಾನಿಸ್ತಾನ):ಶೀಘ್ರದಲ್ಲೇ ನಮ್ಮನ್ನು (ತಾಲಿಬಾನ್​) ವಿಶ್ವ ಗುರುತಿಸುತ್ತದೆ ಎಂದು ಮಾಹಿತಿ ಮತ್ತು ಸಂಸ್ಕೃತಿಯ ಉಪಮಂತ್ರಿ ಮತ್ತು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಹಲವಾರು ದೇಶಗಳ ಪ್ರತಿನಿಧಿಗಳು ನಮ್ಮನ್ನು ಭೇಟಿ ಮಾಡಿದ್ದಾರೆ ಎಂದಿದ್ದಾರೆ. ಸರ್ಕಾರಕ್ಕೆ ಮಾನ್ಯತೆ ನೀಡುವಂತೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ಜಬೀವುಲ್ಲಾ ಮಾಹಿತಿ ನೀಡಿದ್ದಾರೆ.

ಮಾನವ ಮತ್ತು ಮಹಿಳೆಯರ ಹಕ್ಕುಗಳನ್ನು ಗೌರವಿಸುವುದು. ಜನಸ್ನೇಹಿ ಸರ್ಕಾರ ರೂಪಿಸುವುದು, ಆಫ್ಘನ್​ ಮಣ್ಣನ್ನು ಭಯೋತ್ಪಾದನೆಗೆ ಬಳಸದಂತೆ ಅಂತಾರಾಷ್ಟ್ರೀಯ ಸಮುದಾಯವು ತಾಲಿಬಾನ್​ಗೆ ಒತ್ತಾಯಿಸಿದೆ. ಈ ಎಲ್ಲವುಗಳನ್ನು ಜಾರಿಗೊಳಿಸುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಆದರೆ, ಒಂದನ್ನೂ ಕಾರ್ಯರೂಪಕ್ಕೆ ತಂದಿಲ್ಲ.

ಇದನ್ನೂ ಓದಿ: Afghanistan: ಕೆಲ ಸಚಿವಾಲಯಗಳ ಖಾತೆಗಳಿಂದ ಪರಿಶೀಲನಾ ನೀಲಿ ಬ್ಯಾಡ್ಜ್ ತೆಗೆದು ಹಾಕಿದ ಟ್ವಿಟರ್

ಈ ಮಧ್ಯೆ ರಷ್ಯಾ, ಅಮೆರಿಕ, ಜಪಾನ್, ಫ್ರಾನ್ಸ್, ಇಂಗ್ಲೆಂಡ್​​ ದೇಶಗಳು ತಾಲಿಬಾನ್ ಸರ್ಕಾರ ರಚನೆಗೆ ವಿರೋಧ ವ್ಯಕ್ತಪಡಿಸಿವೆ. ಆಗಸ್ಟ್ 15 ರಂದು ತಾಲಿಬಾನ್​, ಆಫ್ಘನ್​ ಮೇಲೆ ಹಿಡಿತ ಸಾಧಿಸಿದ ನಂತರ ಅಶ್ರಫ್​ ಘನಿ ಚುನಾಯಿತ ಸರ್ಕಾರ ಪತನಗೊಂಡಿತು. ಬಳಿಕ ಅಲ್ಲಿ ತಾಲಿಬಾನ್ ಸರ್ಕಾರ ರಚಿಸಿದೆ.

Last Updated : Sep 27, 2021, 11:57 AM IST

ABOUT THE AUTHOR

...view details