ಕರ್ನಾಟಕ

karnataka

ETV Bharat / international

ಅಫ್ಘಾನ್‌ನಲ್ಲಿ ತಾಲಿಬಾನ್‌ 2.0 ಅರಾಜಕತೆ ಶುರು ; ಹಜಾರಾ ನಾಯಕನ ಪ್ರತಿಮೆ ಧ್ವಂಸ - ಅಬ್ದುಲ್ ಅಲಿ ಮಜಾರಿ

ಮಧ್ಯ ಅಫ್ಘಾನಿಸ್ತಾನದ ಪರ್ವತ ಪ್ರದೇಶವಾದ ಹಜರತ್‌ನಲ್ಲಿ ಹೆಚ್ಚಾಗಿ ಈ ಸಮುದಾಯದವರಿದ್ದಾರೆ. 13ನೇ ಶತಮಾನದ ಮಂಗೋಲ್ ಸಾಮ್ರಾಜ್ಯದ ಸ್ಥಾಪಕರಾದ ಗೆಂಘಿಸ್ ಖಾನ್ ಅವರ ವಂಶಸ್ಥರು ಎಂದು ಹೇಳಲಾಗಿದೆ..

taliban blows up slain hazara leader abdul ali mazaris statue in bamiyan
ಅಫ್ಘಾನ್‌ನಲ್ಲಿ ತಾಲಿಬಾನ್‌ 2.0 ಅರಾಜಕತೆ ಶುರು; ಹಜಾರಾ ನಾಯಕನ ಪ್ರತಿಮೆ ಧ್ವಂಸ

By

Published : Aug 18, 2021, 2:35 PM IST

Updated : Aug 18, 2021, 2:47 PM IST

ಕಾಬೂಲ್‌ :ತಾಲಿಬಾನ್ ಅಧಿಕಾರಕ್ಕೆ ಬಂದರೆ ಎರಡು ದಶಕಗಳ ಹಿಂದಿನ ತಮ್ಮ ಅರಾಜಕತೆಯ ಆಡಳಿತವು ಹಿಂತಿರುಗುತ್ತದೆ ಎಂದು ಭಯಪಡುತ್ತಿದ್ದ ಅಲ್ಲಿನ ಜನರ ನಿರೀಕ್ಷೆಗಳು ನಿಜವಾಗುತ್ತಿವೆ. ತಮ್ಮ ಅಟ್ಟಹಾಸವನ್ನು ಮೆರೆಯುತ್ತಿರುವ ತಾಲಿಬಾನ್‌ಗಳು ಹಜಾರಾ ನಾಯಕ ಅಬ್ದುಲ್ ಅಲಿ ಮಜಾರಿ ಅವರ ಪ್ರತಿಮೆಯನ್ನು ಸ್ಫೋಟಿಸಿ ಧ್ವಂಸಗೊಳಿಸಿದ್ದಾರೆ.

ಬಾಮಿಯಾನ್‌ನಲ್ಲಿರುವ ಈ ಪ್ರತಿಮೆಯ ನಾಮಾವಶೇಷ ಇಲ್ಲದಂತೆ ಮಾಡಿದ್ದಾರೆ. ಈ ಹಿಂದೆ 1995ರಲ್ಲಿ ಬುದ್ಧ ಪ್ರತಿಮೆ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಈ ಪ್ರದೇಶದಲ್ಲಿ ತಾಲಿಬಾನ್ ನಾಶಪಡಿಸಿತ್ತು. ಇದನ್ನು ಮಾನವ ಹಕ್ಕುಗಳ ಕಾರ್ಯಕರ್ತ ಸ್ಯಾಲಿ ಜಾವೇದ್ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. ಅಫ್ಘಾನ್ ಜನರಿಗೆ ತಾಲಿಬಾನ್ ಬಹಳ ದೊಡ್ಡ 'ಕ್ಷಮಾದಾನ' ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕತಾರ್‌ನಿಂದ ಅಫ್ಘಾನ್‌ಗೆ ಪ್ರಯಾಣಿಸಿದ ತಾಲಿಬಾನ್‌ ತಂತ್ರಗಾರ ಮುಲ್ಲಾ ಅಬ್ದುಲ್ ಘನಿ

ಹಜಾರಾ ನಾಯಕ ಅಬ್ದುಲ್ ಅಲಿಯನ್ನು ತಾಲಿಬಾನ್‌ಗಳು 1995ರಲ್ಲಿ ಗಲ್ಲಿಗೇರಿಸಿದ್ದರು. ಹಲವು ವರ್ಷಗಳಿಂದ ಹಜಾರಾ ಸಮುದಾಯd ಮೇಲೆ ಇವರು ದಾಳಿ ಮುಂದುವರಿಸುತ್ತಲೇ ಬಂದಿದ್ದಾರೆ. ಹಜಾರರು ಅಫ್ಘಾನಿಸ್ತಾದ ಒಂದು ಸಾಂಪ್ರದಾಯಿಕ ಬುಡಕಟ್ಟಿಗೆ ಸೇರಿದವರು.

ಮಧ್ಯ ಅಫ್ಘಾನಿಸ್ತಾನದ ಪರ್ವತ ಪ್ರದೇಶವಾದ ಹಜರತ್‌ನಲ್ಲಿ ಹೆಚ್ಚಾಗಿ ಈ ಸಮುದಾಯದವರಿದ್ದಾರೆ. 13ನೇ ಶತಮಾನದ ಮಂಗೋಲ್ ಸಾಮ್ರಾಜ್ಯದ ಸ್ಥಾಪಕರಾದ ಗೆಂಘಿಸ್ ಖಾನ್ ಅವರ ವಂಶಸ್ಥರು ಎಂದು ಹೇಳಲಾಗಿದೆ.

ತಮ್ಮ ಗುಂಪಿನ ಸದಸ್ಯೆ ಸಲೀಮಾ ಹಜಾರಿ ಅವರನ್ನೂ ತಾಲಿಬಾನ್ ಬಂಧಿಸಿದೆ ಎಂದು ಹಜಾರಾ ಮೂಲಗಳು ತಿಳಿಸಿವೆ. ಆಕೆ ಅಫ್ಘಾನ್ ಜಿಲ್ಲೆಯ ಕೆಲವೇ ಮಹಿಳಾ ಗವರ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ.

Last Updated : Aug 18, 2021, 2:47 PM IST

ABOUT THE AUTHOR

...view details