ಕಾಬೂಲ್ (ಅಫ್ಘಾನಿಸ್ತಾನ): ಖಲೀಲ್ ಅಲ್ - ರೆಹಮಾನ್ ಹಕ್ಕಾನಿ ನೇತೃತ್ವದ ತಾಲಿಬಾನ್ ನಿಯೋಗವು ಅಫ್ಘಾನಿಸ್ತಾನದ ರಾಷ್ಟ್ರೀಯ ಸಮನ್ವಯದ ಉನ್ನತ ಮಂಡಳಿಯ ಅಧ್ಯಕ್ಷ ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ, ಜನರ ಸುರಕ್ಷತೆಗಾಗಿ ಕೆಲಸ ಮಾಡುವುದಾಗಿ ತಾಲಿಬಾನ್ ಭರವಸೆ ನೀಡಿದೆ
ಈ ಬಗ್ಗೆ ಅಬ್ದುಲ್ಲಾ ಟ್ವೀಟ್ ಮಾಡಿದ್ದು, ತಮ್ಮ ಮನೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ರಾಷ್ಟ್ರಪತಿ ಹಮೀದ್ ಕರ್ಜೈ, ರಾಷ್ಟ್ರೀಯ ಸಭೆಯ ಕೆಳಮನೆಯ ಸ್ಪೀಕರ್ ಫಜಲ್ ಹದಿ ಮುಸ್ಲಿಮಿಯಾರ್ ಮತ್ತು ಹಲವಾರು ಹಿರಿಯರು ಹಾಜರಿದ್ದರು ಎಂದು ಉಲ್ಲೇಖಿಸಿದ್ದಾರೆ.
ಸಭೆಯಲ್ಲಿ, ನ್ಯಾಯದ ಆಧಾರದ ಮೇಲೆ ಸ್ವತಂತ್ರ ಮತ್ತು ಏಕೀಕೃತ ಅಫ್ಘಾನಿಸ್ತಾನವನ್ನು ಬೆಂಬಲಿಸುವುದಾಗಿ ಅಬ್ದುಲ್ಲಾ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಸಾಮಾಜಿಕ ನ್ಯಾಯದ ಅನುಪಸ್ಥಿತಿಯಲ್ಲಿ, ಭದ್ರತೆಯನ್ನು ಸಾಬೀತುಪಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು ಅಸಾಧ್ಯವೆಂದು ಇತಿಹಾಸವು ತೋರಿಸುತ್ತದೆ ಎಂದು ಅವರು ತಾಲಿಬಾನ್ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.