ಇಸ್ಲಾಮಾಬಾದ್(ಪಾಕಿಸ್ತಾನ):ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿರುವ ಆರೋಪದಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಹರಿಪುರ ಜಿಲ್ಲೆಯಲ್ಲಿ ಸಿಖ್ ಸಮುದಾಯ ಸ್ಥಳೀಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
ಸಿಖ್ ಖಾಲ್ಸಾ ಸೈನ್ಯದ ಪ್ರಮುಖರಾಗಿದ್ದ ಹರಿ ಸಿಂಗ್ ನಲ್ವಾ ಅವರ ಪ್ರತಿಮೆಯನ್ನು ಅಲ್ಲಿನ ಸ್ಥಳೀಯ ಸರ್ಕಾರ ತೆರವುಗೊಳಿಸಿದೆ. ಇದರಿಂದಾಗಿ ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಖ್ಖರು ಪ್ರತಿಭಟನೆ ನಡೆಸುತ್ತಿದ್ದಾರೆ. 2017ರಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಸಿಖ್ ದೊರೆ ರಣಜಿತ್ ಸಿಂಗ್ ಅವರ ಸೇನೆಯ ಪ್ರಮುಖರಾಗಿದ್ದ ಹರಿ ಸಿಂಗ್ ನಲ್ವಾ, ರಣಜಿತ್ ಸಿಂಗ್ ಅವರ ದಿಗ್ವಿಜಯಗಳಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದರು. ಕನಿಷ್ಠ 20 ಯುದ್ಧಗಳಲ್ಲಿ ಇವರು ಭಾಗವಹಿಸಿದ್ದರು.