ವಾಷಿಂಗ್ಟನ್: ನಾವು ಎದುರಿಸುತ್ತಿರುವ ಪಾಲುದಾರಿಕ ಸವಾಲುಗಳನ್ನು ಮಟ್ಟಹಾಕಲು ಮತ್ತು ಮುಕ್ತ ಹಾಗೂ ಸ್ವತಂತ್ರ ಇಂಡೋ - ಪೆಸಿಫಿಕ್ ವಲಯವನ್ನು ಭದ್ರಪಡಿಸಿಕೊಳ್ಳಲು ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ ಎಂದು ಯುಎಸ್ ನೂತನ ಅಧ್ಯಕ್ಷ ಜೋ ಬೈಡನ್ (ಶುಕ್ರವಾರ: ಸ್ಥಳೀಯ ಕಾಲಮಾನ) ಕರೆ ನೀಡಿದ್ದಾರೆ.
ಇಂದು ಬೆಳಗ್ಗೆ, ನಾನು ಅಧ್ಯಕ್ಷನಾದ ಬಳಿಕ ಆಯೋಜನೆಯಾದ ಮೊದಲ ಬಹುಪಕ್ಷೀಯ ಕ್ವಾಡ್ ಶೃಂಗಸಭೆಯಲ್ಲಿ ವರ್ಚುಯಲ್ ಮೂಲಕ ಭಾಗವಹಿಸಿದೆ. ನಾವು ಎದುರಿಸುತ್ತಿರುವ ಪಾಲುದಾರಿಕ ಸವಾಲುಗಳನ್ನು ತೊಡೆದುಹಾಕಲು ಮತ್ತು ಮುಕ್ತ ಹಾಗೂ ಸ್ವತಂತ್ರ ಇಂಡೋ-ಪೆಸಿಫಿಕ್ ಪ್ರದೇಶವನ್ನು ಭದ್ರಪಡಿಸಿಕೊಳ್ಳಲು ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ ಎಂದು ಬೈಡನ್ ಅವರು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಬರೆದಿದ್ದಾರೆ.
ಆಸ್ಟ್ರೇಲಿಯಾ, ಭಾರತ, ಜಪಾನ್ ಹಾಗೂ ಅಮೆರಿಕದ ನಾಯಕರನ್ನು ಒಳಗೊಂಡ ಪ್ರಥಮ ಕ್ವಾಡ್ (ಕ್ವಾಡ್ರಿಲ್ಯಾಟರಲ್ ಏಷ್ಯನ್ ಆರ್ಚ್ ಆಫ್ ಡೆಮಾಕ್ರಸಿ) ಸದಸ್ಯರು ಸಭೆಯ ಹಿಂದಿನ ದಿನ, ಕ್ವಾಡ್ ಗ್ರೂಪಿನ ಪ್ರತಿಯೊಂದು ಸದಸ್ಯ ರಾಷ್ಟ್ರಗಳ ಭವಿಷ್ಯಕ್ಕಾಗಿ ಮುಕ್ತ ಮತ್ತು ಸ್ವತಂತ್ರ ಇಂಡೋ - ಪೆಸಿಫಿಕ್ ಅವಶ್ಯಕವಾಗಿದೆ. ಅಮೆರಿಕ ಇದನ್ನು ಖಚಿತಪಡಿಸಲು ಬದ್ಧವಾಗಿದೆ. ಈ ಪ್ರದೇಶವನ್ನು ಅಂತಾರಾಷ್ಟ್ರೀಯ ಕಾನೂನಿನಿಂದ ನಿಯಂತ್ರಿಸಲಾಗುತ್ತದೆ ಮತ್ತು ದಬ್ಬಾಳಿಕೆಯಿಂದ ಮುಕ್ತವಾಗಿರುತ್ತದೆ ಎಂದಿತ್ತು.