ಲಾಹೋರ್(ಪಾಕಿಸ್ತಾನ): ಮದುವೆ ಸಂಭ್ರಮದಲ್ಲಿ ನವ ಜೋಡಿ ಕಾರು, ಕುದುರೆ ಸೇರಿ ಐಷಾರಾಮಿ ವಾಹನಗಳಲ್ಲಿ ಮದುವೆ ಮಂಟಪಕ್ಕೆ ಬಂದು ಜನರ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಇಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಅವುಗಳ ವಿಡಿಯೋ ಕೂಡ ವೈರಲ್ ಆಗಿವೆ. ಆದರೆ, ಪಾಕಿಸ್ತಾನದಲ್ಲಿ ನಡೆದಿರುವ ಘಟನೆವೊಂದು ವಿಭಿನ್ನವಾಗಿದೆ.
ಪಾಕಿಸ್ತಾನದ ಹುಂಜಾ ಕಣಿವೆ(Hunza Valley) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಧು-ವರರು ಅದ್ದೂರಿ ವಾಹನ ಬಿಟ್ಟು ಜೆಸಿಬಿಯಲ್ಲಿ ಬಂದಿದ್ದಾರೆ. ಜೆಸಿಬಿಗೆ ಹೂವು-ಲೈಟ್ನಿಂದ ಶೃಂಗಾರ ಮಾಡಲಾಗಿದೆ. ಅದರ ಮುಂದಿನ ಭಾಗದಲ್ಲಿ ನವಜೋಡಿ ನಿಂತುಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾರೆ. ಈ ವೇಳೆ ಅನೇಕರು ಸಂಭ್ರಮಿಸಿದ್ದಾರೆ.