ಕರ್ನಾಟಕ

karnataka

ETV Bharat / international

ಪ್ಯಾಂಗಾಂಗ್ ಸರೋವರದ ಬಳಿ ಚೀನಾದಿಂದ ಸೇತುವೆ ನಿರ್ಮಾಣ, ಉಪಗ್ರಹ ಚಿತ್ರಗಳಿಂದ ದೃಢ - ಲೈನ್ ಆಫ್ ಆಕ್ಚುವಲ್ ಕಂಟ್ರೋಲ್

ಭಾರತ ಮತ್ತು ಚೀನಾದ ಸೈನಿಕರ ನಡುವೆ ಗಡಿಯಲ್ಲಿ ಸಂಘರ್ಷ ನಿಂತಿದ್ದರೂ, ಎರಡೂ ದೇಶಗಳ ನಡುವೆ ಆತಂಕದ ವಾತಾವರಣವಿದೆ. ಈಗ ಗಡಿಯಲ್ಲಿ ಚೀನಾದ ಮೂಲಸೌಕರ್ಯ ಅಭಿವೃದ್ಧಿಯ ತೀವ್ರತೆ ಈ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ.

New satellite image shows China constructing bridge on its side of Pangong lake in Ladakh:Sources
ಪ್ಯಾಂಗಾಂಗ್ ಸರೋವರದ ಬಳಿ ಚೀನಾದಿಂದ ಸೇತುವೆ ನಿರ್ಮಾಣ, ಉಪಗ್ರಹ ಚಿತ್ರಗಳಿಂದ ದೃಢ

By

Published : Jan 4, 2022, 7:28 AM IST

ನವದೆಹಲಿ:ಭಾರತ ಮತ್ತು ಚೀನಾ ಸಂಘರ್ಷ ಜೀವಂತವಾಗಿದೆ. ಆಗಾಗ ಚೀನಾ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದ್ದು, ಈಗ ಪೂರ್ವ ಲಡಾಖ್​ನ ಪ್ಯಾಂಗಾಂಗ್ ಸರೋವರದ ಬಳಿ ಸೇತುವೆ ನಿರ್ಮಾಣ ಮಾಡಿ ಮತ್ತೊಂದು ವಿವಾದ ಸೃಷ್ಟಿಸುತ್ತಿದೆ. ಚೀನಾ ಸೇತುವೆ ನಿರ್ಮಾಣ ಮಾಡುತ್ತಿರುವುದು ಉಪಗ್ರಹ ಚಿತ್ರಗಳಿಂದ ಬಹಿರಂಗವಾಗಿದೆ.

ಲೈನ್ ಆಫ್ ಆಕ್ಚುವಲ್ ಕಂಟ್ರೋಲ್​(LAC)ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿರುವ ಪ್ಯಾಂಗಾಂಗ್ ಸರೋವರ ಬಳಿ ಚೀನಾ ಸೇತುವೆ ನಿರ್ಮಾಣ ಮಾಡುತ್ತಿರುವುದಾಗಿ ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗುತ್ತಿವೆ. ಈ ಸೇತುವೆ ಪ್ಯಾಂಗಾಂಗ್ ಸರೋವರದ ಚೀನಾ ಬದಿಯಲ್ಲಿದೆ.

ಜಿಯೋ-ಇಂಟೆಲಿಜೆನ್ಸ್ ತಜ್ಞರಾದ ಡೇಮಿಯನ್ ಸೈಮನ್ ಟ್ವಿಟರ್‌ನಲ್ಲಿ ಉಪಗ್ರಹ ಚಿತ್ರವನ್ನು ಪೋಸ್ಟ್ ಮಾಡಿದ್ದು, ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳನ್ನು ಸಂಪರ್ಕಿಸಲು ಚೀನಾ ಹೊಸ ಸೇತುವೆ ನಿರ್ಮಿಸುತ್ತಿದೆ ಎಂದಿದ್ದಾರೆ.

ಜೂನ್ 15, 2020ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ನಂತರ ಈ ವಲಯವನ್ನು ಬಫರ್ ವಲಯವನ್ನಾಗಿ ಘೋಷಣೆ ಮಾಡಲಾಗಿತ್ತು. ಅಲ್ಲಿಂದ ಸಾಕಷ್ಟು ಮಾತುಕತೆಗಳು ನಡೆದಿದ್ದವು. ಕೆಲವೊಂದು ಮಾತುಕತೆಗಳು ಫಲಪ್ರದವಾದರೆ, ಇನ್ನೂ ಕೆಲವು ನಿರೀಕ್ಷಿತ ಮಟ್ಟ ತಲುಪಲಿಲ್ಲ.

ಈಗಷ್ಟೇ ಹೊಸ ವರ್ಷಕ್ಕೆ ಎರಡೂ ರಾಷ್ಟ್ರಗಳ ಸೈನಿಕರು ಲೈನ್ ಆಫ್​ ಆಕ್ಚುವಲ್ ಕಂಟ್ರೋಲ್​ನ ಸುಮಾರು 10 ಗಡಿ ಪೋಸ್ಟ್​ಗಳಲ್ಲಿ ಸಿಹಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದವು. ಈಗ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಸೇತುವೆ ಮತ್ತೆ ವಿವಾದಕ್ಕೆ ಕಾರಣವಾಗುವ ಸಾಧ್ಯೆತೆಯಿದೆ ಎನ್ನಲಾಗಿದೆ. ಎಲ್​ಎಸಿಯಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿ ಈ ಸೇತುವೆಯಿದೆ.

ಭಾರತವೈ ಕೂಡಾ ತನ್ನ ಗಡಿಯಲ್ಲಿ ಚೀನಾಗೆ ಪ್ರತಿಯಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್‌ನಲ್ಲಿ 19 ಸಾವಿರ ಅಡಿ ಎತ್ತರದ ಉಮ್ಲಿಂಗ್ ಲಾ ಪಾಸ್‌ನಲ್ಲಿ ರಸ್ತೆಯೊಂದನ್ನು ಉದ್ಘಾಟಿಸಲಾಗಿದ್ದು, ಈ ರಸ್ತೆಯನ್ನು ಮಿಲಿಟರಿ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ಭಾರತವೂ ಕೂಡಾ ತನ್ನ ಗಡಿಯಲ್ಲಿ ಚೀನಾಗೆ ಪ್ರತಿಯಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್‌ನಲ್ಲಿ 19 ಸಾವಿರ ಅಡಿ ಎತ್ತರದ ಉಮ್ಲಿಂಗ್ ಲಾ ಪಾಸ್‌ನಲ್ಲಿ ರಸ್ತೆಯೊಂದನ್ನು ಉದ್ಘಾಟಿಸಲಾಗಿದ್ದು, ಈ ರಸ್ತೆಯನ್ನು ಮಿಲಿಟರಿ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ವಿಶೇಷ ಅಧಿವೇಶನಕ್ಕೆ ಒತ್ತಾಯ:ಲೈನ್ ಆಫ್ ಆಕ್ಚುವಲ್ ಕಂಟ್ರೋಲ್​ನಲ್ಲಿ ಚೀನಾ ತನ್ನ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಐಎಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೀನಾ ಮೂಲಸೌಕರ್ಯಗಳೊಂದಿಗೆ ತನ್ನ ಮಿಲಿಟರಿ ಶಕ್ತಿಯನ್ನೂ ಕೂಡಾ ಹೆಚ್ಚಿಸಿಕೊಳ್ಳುತ್ತಿದೆ. ಇದು ಭಾರತಕ್ಕೆ ಮಾರಕವಾಗಲಿದ್ದು, ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ಕೇಂದ್ರ ಸರ್ಕಾರವನ್ನು ಓವೈಸಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದ 2022ರ ಮೊದಲ ಸೂರ್ಯೋದಯದ ಫೋಟೋ

ABOUT THE AUTHOR

...view details