ಕಠ್ಮಂಡು:ನೇಪಾಳ ದೇಶದ ಬಂಧನ ಹೆಸರಿನ ಹದಿನೆಂಟು ವರ್ಷದ ಹುಡುಗಿಯೊಬ್ಬಳು ನಿರಂತರವಾಗಿ 126 ಗಂಟೆಗಳ ಕಾಲ(ಐದು ದಿನ) ನೃತ್ಯ ಮಾಡುವ ಮೂಲಕ ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾಳೆ.
ಐದನೇ ವಯಸ್ಸಿಗೆ ನೃತ್ಯ ಆರಂಭಿಸಿದ್ದ ಬಂಧನ, ತನ್ನ ತಮ್ಮ ಈಕೆಗೆ ಸಾಥ್ ನೀಡುತ್ತಿದ್ದ. ನೇಪಾಳ ಹಾಗೂ ಭಾರತದಲ್ಲಿ ನೃತ್ಯದ ತರಬೇತಿ ಪಡೆದಿದ್ದಾಳೆ. ಪ್ರಸ್ತುತ ಈಕೆ ಕಠ್ಮಂಡುವಿನಲ್ಲಿ ಬ್ಯುಸಿನೆಸ್ ಮ್ಯಾನೆಜ್ಮೆಂಟ್ ಅಭ್ಯಸಿಸುತ್ತಿದ್ದಾಳೆ.