ಕ್ಯಾಲಿಫೋರ್ನಿಯಾ:ಮಹಿಳೆಯೊಬ್ಬಳು ತನ್ನೊಂದಿಗೆ ಡ್ಯಾನ್ಸ್ ಮಾಡಲು ಬರಲಿಲ್ಲ ಎಂಬ ಕಾರಣಕ್ಕಾಗಿ ಆಕೆಯ 10 ವರ್ಷದ ಮಗುವಿಗೆ ಗುಂಡಿಕ್ಕಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಮಹಿಳೆ ತನ್ನೊಂದಿಗೆ ಡ್ಯಾನ್ಸ್ ಮಾಡಲು ಬರಲಿಲ್ಲ ಎಂದು ಮಗುವಿಗೆ ಗುಂಡಿಕ್ಕಿದ ಪಾಪಿ! - ಮಗುವಿಗೆ ಗುಂಡು
ಮಹಿಳೆಯೊಬ್ಬಳು ತನ್ನೊಂದಿಗೆ ಡ್ಯಾನ್ಸ್ ಮಾಡಿ, ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಆಕೆಯ ಮಗುವಿನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ 18 ವರ್ಷದ ಯುವಕ ಭಾಗಿಯಾಗಿದ್ದ. ಇದೇ ಕಾರ್ಯಕ್ರಮದಲ್ಲಿ ತನ್ನ ಮಗುವಿನೊಂದಿಗೆ 23 ವರ್ಷದ ಮಹಿಳೆ ಕೂಡ ಭಾಗಿಯಾಗಿದ್ದಳು. ಈ ವೇಳೆ ತನ್ನೊಂದಿಗೆ ಡ್ಯಾನ್ಸ್ ಮಾಡಲು ಬರುವಂತೆ ಹಾಗೂ ದೈಹಿಕ ಸಂಪರ್ಕ ಬೆಳೆಸುವಂತೆ ಆತ ಕೇಳಿದ್ದಾನೆ ಎನ್ನಲಾಗಿದೆ. ಇದಕ್ಕೆ ಮಹಿಳೆ ನಿರಾಕರಿಸುತ್ತಿದ್ದಂತೆ ಆಕೆಯ ಮಗುವಿನ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಮಗುವನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆಯುತ್ತಿದ್ದಂತೆ ತಕ್ಷಣ ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಆತನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಇನ್ನು ಪೊಲೀಸರು ತಿಳಿಸಿರುವ ಪ್ರಕಾರ ಇವರ ನಡುವೆ ಮುಂಚಿತವಾಗಿ ಯಾವುದೇ ಸಂಬಂಧವಿರಲಿಲ್ಲ. ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆಯೇ ಆತ ಈ ಕೃತ್ಯವೆಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.