ಕರ್ನಾಟಕ

karnataka

ETV Bharat / international

Video: ಅಫ್ಘಾನಿಸ್ತಾನದ ಧ್ವಜ ಮರು ಸ್ಥಾಪಿಸುವಂತೆ ಪ್ರತಿಭಟನೆ: ಗುಂಡಿನ ಮಳೆಗರೆದ ತಾಲಿಬಾನಿಗಳು - ಒಬ್ಬನ ಸಾವು

ಅಫ್ಘಾನಿಸ್ತಾನದ ಕಚೇರಿಗಳಲ್ಲಿ ತಾಲಿಬಾನ್ ಧ್ವಜದ ಬದಲು ಅಫ್ಘಾನಿಸ್ತಾನದ ಧ್ವಜವನ್ನು ಮರು ಸ್ಥಾಪಿಸುವಂತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ತಾಲಿಬಾನಿ ಹೋರಾಟಗಾರರು ಗುಂಡು ಹಾರಿಸಿದ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಓರ್ವ ಆಫ್ಘನ್​​ ವ್ಯಕ್ತಿ ಸಾವನ್ನಪ್ಪಿದ್ದಾರೆ.

afghanistans
ವೈರಲ್​ ವಿಡಿಯೋ

By

Published : Aug 18, 2021, 3:52 PM IST

Updated : Aug 18, 2021, 7:58 PM IST

ಕಾಬೂಲ್​( ಅಫ್ಘಾನಿಸ್ತಾನ): ಆಗಸ್ಟ್ 15 ರಂದು ತಾಲಿಬಾನ್​ ಉಗ್ರ ಸಂಘಟನೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಅಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಅಫ್ಘಾನಿಸ್ತಾನದ ಜಲಾಲಾಬಾದ್ ನಗರದ ಜನರು ಬುಧವಾರ ಕಚೇರಿಗಳಲ್ಲಿ ತಾಲಿಬಾನ್ ಧ್ವಜದ ಬದಲು ಅಫ್ಘಾನಿಸ್ತಾನದ ಧ್ವಜವನ್ನು ಮರು ಸ್ಥಾಪಿಸುವಂತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ವೈರಲ್​ ವಿಡಿಯೋ

ಇದನ್ನೂ ಓದಿ:ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ.. ಈವರೆಗೂ 40 ಮಂದಿಯ ಹತ್ಯೆ..

ಈ ವೇಳೆ, ತಾಲಿಬಾನ್ ಹೋರಾಟಗಾರರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ಪಜ್ವಾಕ್ ಆಫ್ಘನ್​ ನ್ಯೂಸ್ ವರದಿ ಮಾಡಿದೆ. ಈ ವೇಳೆ ಪ್ರತಿಭಟನಾ ನಿರತ ಓರ್ವ ಅಫ್ಘಾನ್​ ವ್ಯಕ್ತಿ ಮೃತಪಟ್ಟಿದ್ದಾನೆ. ಇನ್ನು ತಾಲಿಬಾನ್ ಸಂಘಟನೆಯವರು ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದ ಕೆಲವು ಪತ್ರಕರ್ತರ ಮೇಲೆಯೂ ಹಲ್ಲೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ನೂರಾರು ಜನರು ಅಫ್ಘಾನಿಸ್ತಾನದ ಧ್ವಜ ಹೊತ್ತು ಮೆರವಣಿಗೆ ಹೊರಟಿದ್ದನ್ನು ಕಾಣಬಹುದು. ಪ್ರತಿಭಟಬೆ ಜೋರಾಗುತ್ತಿದ್ದಂತೆ ತಾಲಿಬಾನ್​ ಉಗ್ರರು ಫೈರಿಂಗ್​​ ನಡೆಸಿದ್ದಾರೆ. ಗುಂಡಿನ ಸದ್ದು ಕೇಳಿ ಭಯಭಿತರಾದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಒಬ್ಬ ಪ್ರತಿಭಟನಾಕಾರ ತಾಲಿಬಾನಿಗಳ ಗುಂಡಿಗೆ ಬಲಿಯಾಗಿದ್ದಾನೆ.

ಮಂಗಳವಾರ ಆಫ್ಘನ್ ಮಹಿಳೆಯರ ಗುಂಪು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ ಅಫ್ಘಾನಿಸ್ತಾನದಲ್ಲಿ ಮೊದಲ ಸಾರ್ವಜನಿಕ ಪ್ರತಿಭಟನೆಯನ್ನು ನಡೆಸಿತು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ, ಮಹಿಳೆಯರು ಸಾಮಾಜಿಕ ಭದ್ರತೆ, ಕೆಲಸ ಮಾಡುವ ಹಕ್ಕು, ಶಿಕ್ಷಣದ ಹಕ್ಕು ಮತ್ತು ರಾಜಕೀಯ ಹಕ್ಕನ್ನು ಒಳಗೊಂಡಂತೆ ಇತರ ತಮ್ಮ ಹಕ್ಕುಗಳನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು.

Last Updated : Aug 18, 2021, 7:58 PM IST

ABOUT THE AUTHOR

...view details