ಕರ್ನಾಟಕ

karnataka

ETV Bharat / international

ಚರ್ಚ್ ದಾಳಿಗೆ ಸಂಬಂಧಿಸಿರುವ ಶಂಕಿತನನ್ನು ಗುಂಡಿಕ್ಕಿ ಕೊಂದ ಪೊಲೀಸರು

ಇಂಡೋನೇಷ್ಯಾದಲ್ಲಿ ಚರ್ಚ್ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.

Indonesian police kills suspect linked to church attack
Indonesian police kills suspect linked to church attack

By

Published : Apr 15, 2021, 7:42 PM IST

ಜಕಾರ್ತಾ (ಇಂಡೋನೇಷ್ಯಾ): ದಕ್ಷಿಣ ಸುಲಾವೇಸಿ ಪ್ರಾಂತ್ಯದ ಚರ್ಚ್‌ನ ಹೊರಗೆ ಕಳೆದ ತಿಂಗಳು ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಇಂಡೋನೇಷ್ಯಾ ಪೊಲೀಸರು ಗುರುವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

"ಕ್ಯಾಥೆಡ್ರಲ್ ಚರ್ಚ್ ಮೇಲೆ ದಾಳಿ ಮಾಡಿದ ಗುಂಪಿನಲ್ಲಿ ಶಂಕಿತನು ಭಾಗಿಯಾಗಿದ್ದಾನೆ ಎಂದು ನಂಬಲಾಗಿದೆ" ಎಂದು ವಕ್ತಾರ ಜುಲ್ಫಾನ್ ಹೇಳಿದ್ದಾರೆ.

ಮಕಾಸ್ಸರ್‌ನ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಕ್ಯಾಥೆಡ್ರಲ್ ಮೇಲೆ ಮಾರ್ಚ್ 28ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಕನಿಷ್ಠ 31 ಜನರನ್ನು ಬಂಧಿಸಿದ್ದು, ಇಬ್ಬರು ದಾಳಿಕೋರರು ಸಾವನ್ನಪ್ಪಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪನ್ನು ಬೆಂಬಲಿಸುವ ಉಗ್ರಗಾಮಿ ಸಂಘಟನೆ ಜಮಾ ಅನ್ಷರುದ್ ದೌಲಾದ (ಜೆಎಡಿ) ದಂಪತಿಗಳು ಈ ದಾಳಿ ನಡೆಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

2018ರಲ್ಲಿ ಇಂಡೋನೇಷ್ಯಾದ ಸುರಬಯಾದಲ್ಲಿ ಮೂರು ಚರ್ಚ್​​​​​​ಗಳ ಮೇಲೆ ಆತ್ಮಾಹುತಿ ದಾಳಿ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಸರಣಿ ಉಗ್ರ ದಾಳಿಗೆ ಜೆಎಡಿ ಕಾರಣ ಎಂದು ಆರೋಪಿಸಲಾಗಿದೆ.

ಸಂಘಟಿತ ದಾಳಿಯಲ್ಲಿ 15 ಜನರು ಮತ್ತು 13 ದಾಳಿಕೋರರು ಸಾವನ್ನಪ್ಪಿದ್ದರು.

ABOUT THE AUTHOR

...view details