ರಿಯಾದ್(ಸೌದಿ ಅರೇಬಿಯಾ): ಜಾಗತಿಕವಾಗಿ 18,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮಧ್ಯೆ, 20 ರಾಷ್ಟ್ರಗಳ ಗುಂಪಿನ ನಾಯಕರು ಇಂದು ಜಾಗತಿಕ ಆರ್ಥಿಕತೆಯನ್ನು ರಕ್ಷಿಸುವ ಕ್ರಮಗಳ ಕುರಿತು ಚರ್ಚಿಸಲು ವಿಡಿಯೋ ಕಾನ್ಫರೆನ್ಸ್ ಮೂಲಕ ಶೃಂಗಸಭೆ ನಡೆಸಲಿದ್ದಾರೆ.
ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲಾಜೀಜ್ ಅಲ್ ಸೌದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಶೃಂಗಸಭೆಯು "COVID-19 ಸಾಂಕ್ರಾಮಿಕ ಮತ್ತು ಅದರಿಂದಾಗುತ್ತಿರುವ ಮಾನವ ಮತ್ತು ಆರ್ಥಿಕ ಹಾನಿ ಬಗ್ಗೆ ಚರ್ಚಿಸುವ ಉದ್ದೇಶವನ್ನು ಹೊಂದಿದೆ" ಎಂದು ಜಿ20 ಸಚಿವಾಲಯವು ಮಂಗಳವಾರ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದ ವುಹಾನ್ ನಗರವಾದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾದ ಮಾರಕ ಕೊರೊನಾ ವೈರಸ್, ವಿಶ್ವದಾದ್ಯಂತ 4,14,179 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿಸಿದೆ.