ಇಸ್ಲಾಮಾಬಾದ್(ಪಾಕಿಸ್ತಾನ) :ಬಲೂಚಿಸ್ತಾನ್ ಪ್ರಾಂತ್ಯದಲ್ಲಿದ್ದ ಎರಡು ಸೇನಾ ಶಿಬಿರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ನಾಲ್ವರು ಸೈನಿಕರನ್ನು ಕೊಂದಿದ್ದಾರೆ ಎಂದು ಪಾಕಿಸ್ತಾನದ ಸಚಿವ ಶೇಖ್ ರಶೀದ್ ಗುರುವಾರ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ವಾಯವ್ಯದಲ್ಲಿ ಬಲೂಚಿಸ್ತಾನ ಪ್ರಾಂತ್ಯವಿದ್ದು, ಇಲ್ಲಿ ಆಗಾಗ್ಗೆ ದಾಳಿಗಳು ಸಂಭವಿಸುತ್ತಿರುತ್ತವೆ. ತಪಾಸಣಾ ಕೇಂದ್ರವೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ತು ಮಂದಿ ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದ ಘಟನೆ ಒಂದು ವಾರದ ಹಿಂದೆ ಇದೇ ಪ್ರಾಂತ್ಯದ ಕೆಚ್ ಜಿಲ್ಲೆಯಲ್ಲಿ ನಡೆದಿತ್ತು.
ಬುಧವಾರ ಸಂಜೆ ಎರಡು ಸೇನಾ ಶಿಬಿರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಒಂದು ಶಿಬಿರವು ನೌಷ್ಕಿ ನಗರದ ಸಮೀಪದಲ್ಲಿದ್ದರೆ ಮತ್ತು ಮತ್ತೊಂದು ಪಂಜಗುರ್ ಜಿಲ್ಲೆಯಲ್ಲಿದೆ ಎಂದು ರಶೀದ್ ಹೇಳಿದ್ದಾರೆ.