ಕಾಬೂಲ್ (ಅಫ್ಘಾನಿಸ್ತಾನ): ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಕಂಡಿದ್ದ ಅಫ್ಘಾನಿಸ್ತಾನದ 18 ವರ್ಷದ ಮಹಿಳಾ ಬಾಕ್ಸರ್ ಸೀಮಾ ರಝಾಯ್, ತಾಲಿಬಾನ್ನಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ದೇಶ ತೊರೆದಿದ್ದಾರೆ.
ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ವೇಳೆ ನಾನು ನನ್ನ ಕೋಚ್ನೊಂದಿಗೆ ಬಾಕ್ಸಿಂಗ್ ತರಬೇತಿಯಲ್ಲಿದ್ದೆ. ಇದನ್ನು ತಿಳಿದಿದ್ದ ಕೆಲವರು ನನ್ನ ವಿಚಾರವನ್ನು ತಾಲಿಬಾನಿಗಳಿಗೆ ಹೇಳಿದ್ದಾರೆ. "ನೀನು ಇಲ್ಲಿ ತರಬೇತಿಯನ್ನು ನಿಲ್ಲಿಸಬೇಕು, ಇಲ್ಲವೇ ಅಮೆರಿಕಕ್ಕೆ ಹೋಗಿ ಬಾಕ್ಸಿಂಗ್ ಮುಂದುವರೆಸಬೇಕು. ಇದಕ್ಕೆ ಒಪ್ಪದಿದ್ದರೆ ಖಂಡಿತವಾಗಿಯೂ ನಿನ್ನನ್ನು ಕೊಲ್ಲುತ್ತೇವೆ" ಎಂದು ತಾಲಿಬಾನ್ ಕಡೆಯಿಂದ ನನ್ನ ಮನೆಗೆ ಪತ್ರ ಕಳುಹಿಸಿಕೊಡಲಾಗಿತ್ತು ಎಂದು ಸೀಮಾ ರಝಾಯ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.