ನವದೆಹಲಿ :ದೆಹಲಿಯಿಂದ ದೋಹಾಗೆ ಹೊರಟ್ಟಿದ್ದ ಕತಾರ್ ವಿಮಾನ ತಾಂತ್ರಿಕ ದೋಷದಿಂದ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಆತಂಕದ ಘಟನೆ ನಡೆದಿದೆ. ಕ್ಯೂಆರ್ 579 ಎಂಬ ಕತಾರ್ ಏರ್‌ವೇಸ್ ವಿಮಾನದಲ್ಲಿ 100 ಮಂದಿ ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.
ದೆಹಲಿಯಿಂದ ದೋಹಾಗೆ ಹೊರಟಿದ್ದ ಕತಾರ್ ವಿಮಾನದಲ್ಲಿ ತಾಂತ್ರಿಕ ದೋಷ ; ಕರಾಚಿಯಲ್ಲಿ ತುರ್ತು ಭೂಸ್ಪರ್ಶ!
ತಾಂತ್ರಿಕ ದೋಷದಿಂದ ದೆಹಲಿ-ದೋಹಾ ಮಾರ್ಗದ ಕತಾರ್ ಏರ್ವೇಸ್‌ನ ವಿಮಾನ ಕರಾಚಿಯಲ್ಲಿ ತುರ್ತಾಗಿ ಲ್ಯಾಂಡಿಂಗ್ ಆಗಿದೆ. ವಿಮಾನದಲ್ಲಿ 100 ಮಂದಿ ಪ್ರಯಾಣಿಕರಿದ್ದರು..
ದೆಹಲಿಯಿಂದ ದೋಹಾಗೆ ಹೊರಟಿದ್ದ ಕತಾರ್ ವಿಮಾನದಲ್ಲಿ ತಾಂತ್ರಿಕ ದೋಷ; ಕರಾಚಿಯಲ್ಲಿ ತುರ್ತು ಭೂಸ್ಪರ್ಶ..!
ದೋಹದಿಂದ ಬೇರೆ ಕಡೆಗೆ ತೆರಳಲು ಅಲ್ಲಿಂದ ವಿಮಾನ ಟಿಕೆಟ್ ಪಡೆಯಲಾಗಿತ್ತು. ಆದರೆ, ಈ ವಿಮಾನ ಕರಾಚಿಯಿಂದ ಯಾವಾಗ ಟೇಕ್ ಆಫ್ ಆಗುತ್ತೆ ಎಂಬುದರ ಕುರಿತು ಯಾವೊಬ್ಬ ಅಧಿಕಾರಿಯೂ ಮಾಹಿತಿ ನೀಡುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ವ್ಯಕ್ತಿ ಪ್ರಾಣ ಕಾಪಾಡಲು ವಿಮಾನ ತುರ್ತು ಭೂಸ್ಪರ್ಶ: ಬದುಕುಳಿಯಲಿಲ್ಲ ಪ್ರಯಾಣಿಕ