ಕರ್ನಾಟಕ

karnataka

2021ರ ಮಧ್ಯಭಾಗದವರೆಗೆ ಕೋವಿಡ್​ ಲಸಿಕೆ ನಿರೀಕ್ಷೆ ಇಲ್ಲ ಎಂದ ವಿಶ್ವ ಆರೋಗ್ಯ ಸಂಸ್ಥೆ

By

Published : Sep 4, 2020, 8:45 PM IST

Updated : Sep 4, 2020, 8:57 PM IST

2021ರ ಮಧ್ಯ ಭಾಗದವರೆಗೆ ಕೋವಿಡ್​ ಲಸಿಕೆ ನಿರೀಕ್ಷೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದ್ದು, ನಾವು ಬಯಸುತ್ತಿರುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಯಾವುದೇ ಲಸಿಕೆ ಬಂದಿಲ್ಲ ಎಂದು ತಿಳಿಸಿದೆ.

COVID-19 Vaccination
COVID-19 Vaccination

ಜಿನಿವಾ: ಪ್ರಪಂಚದಾದ್ಯಂತ ಕೊರೊನಾ ವೈರಸ್​ ಅಬ್ಬರ ಜೋರಾಗಿದ್ದು, ಅನೇಕ ದೇಶಗಳು ಕೊರೊನಾ ಲಸಿಕೆ ಕಂಡು ಹಿಡಿಯುವ ಕೆಲಸದಲ್ಲೂ ನಿರಂತವಾಗಿವೆ. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಮಾಹಿತಿ ನೀಡಿದ್ದು, 2021ರ ಮಧ್ಯ ಭಾಗದ ವರೆಗೆ ಕೋವಿಡ್​ ಲಸಿಕೆ ನಿರೀಕ್ಷೆ ಇಲ್ಲ ಎಂದಿದೆ.

ವಿವಿಧ ದೇಶಗಳಿಂದ ಸಂಶೋಧನೆಗೊಳಪಟ್ಟಿರುವ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆ ಬಯಸಿರುವ ಪರಿಣಾಮಕಾರಿ ಶೇ. 50ರಷ್ಟು ಗುಣಮಟ್ಟ ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವಕ್ತಾರೆ ಮಾರ್ಗ್​​ರೇಟ್ ಹ್ಯಾರಿಸ್​​​​​​ ಮಾಹಿತಿ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಗಳಲ್ಲಿ ಸುರಕ್ಷತೆ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಿದೆ. ಈಗಾಗಲೇ ರಷ್ಯಾ ಸಿದ್ಧಪಡಿಸಿರುವ ಲಸಿಕೆಯನ್ನ ಮಾನವ ಪ್ರಯೋಗಕ್ಕೆ ಚಾಲನೆ ನೀಡಿದೆ. ಆದರೆ ಇದು ಅಷ್ಟೊಂದು ಸುರಕ್ಷಿತವಾಗಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಅಮೆರಿಕ ಕೂಡ ಅಕ್ಟೋಬರ್​ ತಿಂಗಳ ಅಂತ್ಯದ ವೇಳೆಗೆ ಕೊರೊನಾ ಲಸಿಕೆ ಲಭ್ಯವಾಗುವ ಮಾಹಿತಿ ನೀಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರಲಿದೆ ಎಂಬ ಮಾಹಿತಿ ಗೊತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಡೊನಾಲ್ಡ್​ ಟ್ರಂಪ್​ ಎರಡನೇ ಸಲ ಅಧ್ಯಕ್ಷರಾಗುವ ಉದ್ದೇಶದಿಂದ ಈ ರೀತಿಯಾಗಿ ಹೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Last Updated : Sep 4, 2020, 8:57 PM IST

ABOUT THE AUTHOR

...view details