ಕರ್ನಾಟಕ

karnataka

ETV Bharat / international

ಎಲ್ಲಾ ರಾಷ್ಟ್ರಗಳಿಗೆ ಇನ್ನೂ ಸಿಗದ ಲಸಿಕೆ; 2022ರ ವರೆಗೆ COVID ಇರುತ್ತೆ: WHO

ಬಡ ರಾಷ್ಟ್ರಗಳಿಗೆ ಇನ್ನೂ ಸರಿಯಾದ ರೀತಿಯಲ್ಲಿ ಲಸಿಕೆ ಸಿಗದ ಕಾರಣ 2022ರ ವರೆಗೂ ಜಗತ್ತಿನಲ್ಲಿ ಕೋವಿಡ್‌ (COVID) ಮುಂದುವರೆಯಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಕಳವಳ ವ್ಯಕ್ತಪಡಿಸಿದೆ. ಶ್ರೀಮಂತ ದೇಶಗಳು ಮತ್ತು ಔಷಧೀಯ ಕಂಪನಿಗಳು ಆಫ್ರಿಕಾ ಸೇರಿದಂತೆ ಬಡ ರಾಷ್ಟ್ರಗಳಿಗೂ ಔಷಧಿ ನೀಡಬೇಕೆಂದು ಡಬ್ಲ್ಯುಹೆಚ್‌ಒ ಹಿರಿಯ ಅಧಿಕಾರಿ ಬ್ರೂಸ್ ಐಲ್ವರ್ಡ್ ಮನವಿ ಮಾಡಿದ್ದಾರೆ.

Vaccine inequity will drag Covid pandemic to 2022: WHO
ಎಲ್ಲಾ ರಾಷ್ಟ್ರಗಳಿಗೆ ಇನ್ನೂ ಸಿಗದ ಲಸಿಕೆ; 2022ರ ವರೆಗೆ ಕೋವಿಡ್‌ ಇರುತ್ತೆ: ವಿಶ್ವ ಆರೋಗ್ಯ ಸಂಸ್ಥೆ

By

Published : Oct 21, 2021, 3:49 PM IST

ಲಂಡನ್: ಹಲವಾರು ಬಡ ದೇಶಗಳು ಮಹಾಮಾರಿ ಕೊರೊನಾಗೆ ಇನ್ನೂ ಲಸಿಕೆ ಸ್ವೀಕರಿಸಿಲ್ಲ. ಹೀಗಾಗಿ ಕೋವಿಡ್ -19 ಸಾಂಕ್ರಾಮಿಕವು 2022 ರವರೆಗೆ ಮುಂದುವರಿಯುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಆಫ್ರಿಕಾದಲ್ಲಿ ಕೇವಲ ಶೇ.5 ಕ್ಕಿಂತ ಕಡಿಮೆ ಲಸಿಕೆ ನೀಡಲಾಗಿದೆ. ಡಬ್ಲ್ಯುಹೆಚ್‌ಒ ಹಿರಿಯ ಅಧಿಕಾರಿ ಬ್ರೂಸ್ ಐಲ್ವರ್ಡ್ ಪ್ರಕಾರ, ಇದರರ್ಥ ಕೋವಿಡ್ ಬಿಕ್ಕಟ್ಟು 2022ರವರೆಗೆ ಸಾಗಲಿದೆ ಎಂದು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಕಡಿಮೆ ಆದಾಯ ಹೊಂದಿರುವ ದೇಶಗಳ ಲಸಿಕೆಗಾಗಿ ಕ್ಯೂನಲ್ಲಿ ನಿಂತಿವೆ. ಅಂತಹ ರಾಷ್ಟ್ರಗಳಿಗೆ ಔಷಧೀಯ ಕಂಪನಿಗಳು ಆದ್ಯತೆ ನೀಡಬೇಕು. ಇದಕ್ಕೆ ಶ್ರೀಮಂತ ರಾಷ್ಟ್ರಗಳು ಅವಕಾಶ ನೀಡಬೇಕು ಎಂದು ಐಲ್ವರ್ಡ್‌ ಮನವಿ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಸೇಂಟ್ ಐವ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮಾಡಿದ ಕೊಡುಗೆಗಳ ಬದ್ಧತೆಯನ್ನು ಪ್ರದರ್ಶಿಸಿರುವ ಶ್ರೀಮಂತ ದೇಶಗಳು 'ಸ್ಟಾಕ್‌ಟೇಕ್' ಮಾಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ನಾವು ಹಾದಿಯಲ್ಲಿಲ್ಲ ಎಂದು ನಾನು ನಿಮಗೆ ಹೇಳಬಲ್ಲೆ. ನಾವು ಅದನ್ನು ನಿಜವಾಗಿಯೂ ವೇಗಗೊಳಿಸಬೇಕು. ಈ ಸಾಂಕ್ರಾಮಿಕವು ಅಗತ್ಯಕ್ಕಿಂತ ಒಂದು ವರ್ಷ ಮುಂದುವರಿಯುತ್ತದೆ. ಔಷಧೀಯ ಕಂಪನಿಗಳು ಮತ್ತು ಶ್ರೀಮಂತ ದೇಶಗಳು ಭರವಸೆ ನೀಡಿದ ಡೋಸ್‌ಗಳಲ್ಲಿ ಕೇವಲ ಒಂದು ಡೋಸ್ ಬಡ ರಾಷ್ಟ್ರಗಳಲ್ಲಿ ತಮ್ಮ ಗಮ್ಯಸ್ಥಾನಗಳನ್ನು ತಲುಪುತ್ತಿದೆ ಎಂದಿದ್ದಾರೆ.

ಬಹುಪಾಲು ಕೋವಿಡ್(COVID) ಲಸಿಕೆಗಳನ್ನು ಹೆಚ್ಚಿನ ಆದಾಯ ಅಥವಾ ಮೇಲಿನ ಮಧ್ಯಮ ಆದಾಯದ ದೇಶಗಳಲ್ಲಿ ನೀಡಲಾಗಿದೆ. ಜಾಗತಿಕವಾಗಿ ನೀಡಲಾಗುವ ಡೋಸ್‌ಗಳಲ್ಲಿ ಆಫ್ರಿಕಾ ಕೇವಲ 2.6 ಶೇಕಡಾವನ್ನು ಹೊಂದಿದೆ. ಕೆನಡಾ ಮತ್ತು ಯುಕೆ ತಮ್ಮ ಸ್ವಂತ ಜನಸಂಖ್ಯೆಗೆ ಕೋವಾಕ್ಸಿ ಲಸಿಕೆ ಮೂಲಕ ಯುಎನ್ ಬೆಂಬಲಿತ ಜಾಗತಿಕ ಕಾರ್ಯಕ್ರಮಗಳನ್ನು ನ್ಯಾಯಯುತವಾಗಿ ಮಾಡಿಲ್ಲ ಎಂದು ಆಕ್ಸ್‌ಫ್ಯಾಮ್ ಮತ್ತು ಯುಎನ್‌ಐಡಿಎಸ್ ಅನ್ನು ಒಳಗೊಂಡಿರುವ ದತ್ತಿಗಳ ಗುಂಪುಗಳು ಟೀಕಿಸಿವೆ.

ಕೋವಾಕ್ಸಿ ಲಸಿಕೆಯನ್ನು ಎಲ್ಲಾ ದೇಶಗಳಿಗೂ ನೀಡುವ ಭರವಸೆ ನೀಡಲಾಗಿತ್ತು. ಶ್ರೀಮಂತ ದೇಶಗಳು ಸೇರಿದಂತೆ ಹೆಚ್ಚಿನ G7 ದೇಶಗಳು ಔಷಧೀಯ ಕಂಪನಿಗಳೊಂದಿಗೆ ತಮ್ಮದೇ ಆದ ಒನ್‌ ಟು ಒನ್‌ ಒಪ್ಪಂದಗಳನ್ನು ಮಾಕೊಳ್ಳಲು ಪ್ರಾರಂಭಿಸಿದ ನಂತರ ಇತರೆ ದೇಶಗಳಿಗೆ ಲಸಿಕೆ ತಡೆಹಿಡಿಯಲು ನಿರ್ಧರಿಸಿದವು ಎಂಬ ಆರೋಪಗಳು ಕೇಳಿಬಂದಿದ್ದವು. ಕೆನಡಾ ಮತ್ತು ಯುಕೆ ತಾಂತ್ರಿಕವಾಗಿ ಈ ಮಾರ್ಗದಲ್ಲಿ ಲಸಿಕೆಗಳನ್ನು ಪಡೆಯಲು ಅರ್ಹತೆ ಹೊಂದಿದ್ದವು. ಆದರೆ ಈ ಎರಡೂ ದೇಶಗಳು ತಮ್ಮದೇ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಲಕ್ಷಾಂತರ ಡೋಸ್‌ಗಳನ್ನು ಪಡೆದುಕೊಂಡವು ಎಂದು ಆಕ್ಸ್‌ಫ್ಯಾಮ್‌ನ ಜಾಗತಿಕ ಆರೋಗ್ಯ ಸಲಹೆಗಾರ ರೋಹಿತ್ ಮಾಲ್ಪಾನಿ ಹೇಳಿದ್ದಾರೆ.

ABOUT THE AUTHOR

...view details