ಕರ್ನಾಟಕ

karnataka

ETV Bharat / international

ಅಮೆರಿಕ​​ ಉಪಾಧ್ಯಕ್ಷರ ಮಾಧ್ಯಮ ಕಾರ್ಯದರ್ಶಿಗೂ ಕೊರೊನಾ ಕಾಟ!

ಮಹಾಮಾರಿ ಕೊರೊನಾ ವೈರಸ್​ಗೆ ಈಗಾಗಲೇ ಅಮೆರಿಕ ತತ್ತರಿಸಿ ಹೋಗಿದ್ದು, ಇದರ ಮಧ್ಯೆ ಅಲ್ಲಿನ ಅಧಿಕಾರಿಗಳಲ್ಲೂ ಇದರ ಹರಡುವಿಕೆ ಅಬ್ಬರ ಜೋರಾಗುತ್ತಿದೆ.

US vice president's press secretary
US vice president's press secretary

By

Published : May 9, 2020, 10:25 AM IST

ನ್ಯೂಯಾರ್ಕ್​: ಮಹಾಮಾರಿ ಕೊರೊನಾ ಅಬ್ಬರ ಅಮೆರಿಕದಲ್ಲಿ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈಗಾಗಲೇ ಲಕ್ಷಾಂತರ ಜನರಿಗೆ ಈ ಸೋಂಕು ತಗಲಿದ್ದು, ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಅಮೆರಿಕ ಅಧ್ಯಕ್ಷರು ವಾಸ ಮಾಡುವ ಶ್ವೇತ ಭವನದಲ್ಲಿ ಇದೀಗ ಇಬ್ಬರಿಗೆ ಡೆಡ್ಲಿ ವೈರಸ್​ ಕಾಣಿಸಿಕೊಂಡಿದೆ.

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಅಮೆರಿಕ ಉಪಾಧ್ಯಕ್ಷ ಮೈಕ್​ ಪೆನ್ಸ್​​ ಅವರ ಮಾಧ್ಯಮ ಕಾರ್ಯದರ್ಶಿ ಕೇಟಿ ಮಿಲ್ಲರ್​ಗೆ ಡೆಡ್ಲಿ ವೈರಸ್​​ ಹಬ್ಬಿರುವುದು ಕನ್ಫರ್ಮ್​ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಾಸವಾಗಿರುವ ಶ್ವೇತ ಭವನದಲ್ಲೇ ಇವರು ವಾಸವಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಉಪಾಧ್ಯಕ್ಷ ಮೈಕ್​ ಪೆನ್ಸ್​​ ಅವರನ್ನ ಭೇಟಿಯಾಗಿದ್ದರು ಎನ್ನಲಾಗಿದೆ. ಆದರೆ, ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನ ಇವರು ಭೇಟಿ ಮಾಡಿಲ್ಲ.

ಈಗಾಗಲೇ, ಮಾಹಿತಿ ನೀಡಿರುವ ಅಲ್ಲಿನ ಅಧಿಕಾರಿಗಳು ಶ್ವೇತ ಭವನದಲ್ಲಿ ಕೊರೊನಾ ವೈರಸ್​ ಹರಡದಂತೆ ಎಲ್ಲ ರೀತಿಯ ಮುಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಡೊನಾಲ್ಡ್​ ಟ್ರಂಪ್​ ಕೂಡ ಮಾಹಿತಿ ನೀಡಿದ್ದು, ನಾನು ಅವರೊಂದಿಗೆ ಸಂಪರ್ಕ ಹೊಂದಿಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಅವರ ಮಿಲಿಟರಿ ಸಹಾಯಕ ಕೊರೊನಾ ಪಾಸಿಟಿವ್​ಗೆ ಒಳಗಾಗಿರುವ ಕಾರಣ ತಾವು ಪ್ರತಿದಿನ ಪರೀಕ್ಷೆ ಮಾಡಿಕೊಳ್ಳುತ್ತಿರುವುದಾಗಿ ಟ್ರಂಪ್​ ಹೇಳಿಕೆ ನೀಡಿದ್ದರು. ಇಲ್ಲಿಯವರೆಗೆ ಅಮೆರಿಕದಲ್ಲಿ 12,83,929 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 10,07,756 ಜನರು ವೈರಸ್​ನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ 1,98,993 ಜನರು ಡಿಸ್ಚಾರ್ಜ್​​ ಆಗಿದ್ದು, 77,180 ಜನರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details