ಕರ್ನಾಟಕ

karnataka

ETV Bharat / international

ಧಾರ್ಮಿಕ ಸ್ವಾತಂತ್ರ್ಯ ದಮನ, ಮಾನವ ಹಕ್ಕುಗಳ ಉಲ್ಲಂಘನೆ : ಚೀನಾ ವಿರುದ್ಧ ಯುಎಸ್ ಗುಡುಗು - ಚೀನಾ ವಿರುದ್ಧ ಯುಎಸ್ ಗುಡುಗು

ಯುಎಸ್ ತನ್ನ 2020 ಅಂತಾ​ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ (IRF) ವರದಿಯನ್ನು ಬಿಡುಗಡೆ ಮಾಡಿದೆ. ಇದು ಸುಮಾರು 200 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯ ವಿವರವಾದ ವಾಸ್ತವಿಕತೆಯನ್ನು ಒದಗಿಸುತ್ತದೆ. ಸರ್ಕಾರಗಳು ಮಾಡಿದ ಧಾರ್ಮಿಕ ಉಲ್ಲಂಘನೆಗಳು ಮತ್ತು ನಿಂದನೆಗಳ ವರದಿ ದಾಖಲಿಸಿದೆ.

ಯುಎಸ್ ಗುಡುಗು
ಯುಎಸ್ ಗುಡುಗು

By

Published : May 13, 2021, 5:07 PM IST

ವಾಷಿಂಗ್ಟನ್: ಅಮೆರಿಕ-ಚೀನಾ ಶೀತಲಸಮರ ಮುಂದುವರಿದಿದ್ದು, ಡ್ರ್ಯಾಗನ್ ರಾಷ್ಟ್ರ ಕೈಗೊಳ್ಳುವ ಕೆಲ ನಿರ್ಧಾರದಗಳ ಬಗ್ಗೆ ಯುಎಸ್ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ಇದೀಗ ಫಾಲುನ್ ಗಾಂಗ್ ಸಾಧಕರನ್ನು ಬಂಧಿಸಿರುವುದು ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಚೀನಾದ ವಿರುದ್ಧ ವಿಶ್ವದ ದೊಡ್ಡಣ್ಣ ಮತ್ತೆ ಗುಡುಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಚೀನಾ ಮತ್ತು ಇತರ ದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದುರುಪಯೋಗಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಯುಎಸ್ ತನ್ನ 2020 ಅಂತಾ​ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ (IRF) ವರದಿಯನ್ನು ಬಿಡುಗಡೆ ಮಾಡಿದೆ. ಇದು ಸುಮಾರು 200 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿಯ ವಿವರವಾದ ವಾಸ್ತವಿಕತೆಯನ್ನು ಒದಗಿಸುತ್ತದೆ. ಸರ್ಕಾರಗಳು ಮಾಡಿದ ಧಾರ್ಮಿಕ ಉಲ್ಲಂಘನೆಗಳು ಮತ್ತು ನಿಂದನೆಗಳ ವರದಿ ದಾಖಲಿಸಿದೆ.

ಇದನ್ನೂ ಓದಿ:ಚೀನಾ ಗಾಯಗೊಂಡಿರುವ ಪ್ರಾಣಿಯಂತೆ ವರ್ತಿಸುತ್ತಿದೆ: ಜಿತೇಂದ್ರ ತ್ರಿಪಾಠಿ

ಈ ವರ್ಷದ ಐಆರ್​ಎಫ್ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಬ್ಲಿಂಕೆನ್, 56 ದೇಶಗಳು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅವಕಾಶ ಕೊಟ್ಟಿಲ್ಲ. ಅದರಲ್ಲೂ ಮ್ಯಾನ್ಮಾರ್, ಇರಾನ್, ಚೀನಾ ಪ್ರಮುಖ ಸ್ಥಾನದಲ್ಲಿವೆ ಎಂದು ಹೇಳಿದ್ದಾರೆ. ಪ್ರಪಂಚದಾದ್ಯಂತದ ಎಲ್ಲಾ ರೀತಿಯ ತಾರತಮ್ಯ ಹೋಗಲಾಗಿಸಲು ಮಾನವ ಹಕ್ಕುಗಳ ಆಯೋಗ ಸೇರಿದಂತೆ ಸಾಮಾಜಿಕ ಸಂಸ್ಥೆಗಳೊಂದಿಗೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ABOUT THE AUTHOR

...view details