ಕರ್ನಾಟಕ

karnataka

ನೆರೆ ರಾಷ್ಟ್ರಗಳ ಮೇಲೆ ಚೀನಾ ಬೆದರಿಕೆ ಬಗ್ಗೆ ಕಳವಳವಿದೆ: ಶ್ವೇತಭವನ

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿರುವ ಸ್ನೇಹಿತರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಎಮಿಲಿ ಜೆ ಹಾರ್ನ್ ಚೀನಾ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

By

Published : Feb 2, 2021, 9:35 AM IST

Published : Feb 2, 2021, 9:35 AM IST

white house
ಶ್ವೇತಭವನ

ವಾಷಿಂಗ್ಟನ್: ಚೀನಾ ತನ್ನ ನೆರೆಹೊರೆಯ ರಾಷ್ಟ್ರಗಳನ್ನು ಬೆದರಿಸುತ್ತಿದ್ದು, ಈ ಪ್ರಯತ್ನಗಳ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್ ಆಡಳಿತ ಸೋಮವಾರ ಕಳವಳ ವ್ಯಕ್ತಪಡಿಸಿದೆ.

ಗಡಿ ಸಂಘರ್ಷದ ನಂತರ ಚೀನಾ ಮತ್ತು ಭಾರತದ ನಡುವಿನ ಮಾತುಕತೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ವಿಚಾರದಲ್ಲಿ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಎಮಿಲಿ ಜೆ ಹಾರ್ನ್ ಹೇಳಿದ್ದಾರೆ.

ಇದನ್ನೂ ಓದಿ:ಮಾಜಿ ಸಿಎಂ ಸಂಬಂಧಿ ಸಿದ್ದಾರ್ಥ ಕೊಲೆ ಕೇಸ್‌: ಪೊಲೀಸರಿಗೆ ಹೆದರಿ ಆರೋಪಿ ಆತ್ಮಹತ್ಯೆ

ಭಾರತೀಯ ಭೂಪ್ರದೇಶಗಳಿಗೆ ಚೀನಾ ನುಸುಳಲು ಮತ್ತು ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ಚೀನಾದ ಯತ್ನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಬೈಡನ್ ಆಡಳಿತ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿರುವ ಸ್ನೇಹಿತರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದಿರುವ ಹಾರ್ನ್ ಪರಸ್ಪರರ ಸುರಕ್ಷತೆ, ಮೌಲ್ಯವನ್ನು ಹೆಚ್ಚಿಸಲು ಸಹಕಾರ ನೀಡುವುದಾಗಿ ಹೇಳಿದ್ದಾರೆ. ಚೀನಾ ಭಾರತದ ನಡುವಿನ ಸಂಘರ್ಷದ ಕುರಿತಂತೆ ಬೈಡನ್ ಆಡಳಿತದಿಂದ ಇದು ಮೊದಲ ಪ್ರತಿಕ್ರಿಯೆಯಾಗಿದೆ.

ಕೆಲವು ದಿನಗಳ ಮೊದಲು, 'ಭಾರತ, ಚೀನಾ ನಡುವಿನ ಗಡಿ ಘರ್ಷಣೆ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ' ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು.

ABOUT THE AUTHOR

...view details