ಕರ್ನಾಟಕ

karnataka

ETV Bharat / international

ಅಮೆರಿಕ ಸೇನೆಯಿಂದ ಐಸಿಸ್ ನಾಯಕನ ಹತ್ಯೆ: ಶ್ವೇತಭವನ ಟ್ವೀಟ್​

ಐಸಿಸ್ ನಾಯಕ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೈಶಿಯನ್ನು ಅಮೆರಿಕ ಸೇನೆ ಬೇಟೆಯಾಡಿರುವುದಾಗಿ ಅಮೆರಿಕದ ಶ್ವೇತ ಭವನ ಟ್ವೀಟ್ ಮಾಡಿದೆ.

US army killed  ISIS Leader
ಅಮೆರಿಕ ಸೇನೆಯಿಂದ ಐಸಿಸ್ ನಾಯಕನ ಹತ್ಯೆ

By

Published : Feb 3, 2022, 7:05 PM IST

Updated : Feb 3, 2022, 7:49 PM IST

ವಾಷಿಂಗ್ಟನ್ (ಅಮೆರಿಕ): ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಐಸಿಸ್ ನಾಯಕ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೈಶಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾಹಿತಿ ನೀಡಿದ್ದಾರೆ ಎಂದು ಶ್ವೇತ ಭವನ ಟ್ವೀಟ್ ಮಾಡಿದೆ.

ಅಮೆರಿಕದ ಸೇನೆ ಕಳೆದ ರಾತ್ರಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೈಶಿಯನ್ನು ಕೊಲ್ಲಲಾಗಿದೆ ಎಂದು ಜೋ ಬೈಡನ್ ಸ್ಪಷ್ಟನೆ ನೀಡಿದ್ದಾರೆ.

ವಾಯವ್ಯ ಸಿರಿಯಾದಲ್ಲಿ ನಡೆದ ದಾಳಿಯಲ್ಲಿ ಐಸಿಸ್ ಮುಖ್ಯಸ್ಥನನ್ನು ಕೊಲ್ಲಲಾಗಿದ್ದು, ನಮ್ಮ ಸಶಸ್ತ್ರ ಪಡೆಗಳ ಶೌರ್ಯಕ್ಕೆ ಧನ್ಯವಾದಗಳು, ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಅಮೆರಿಕನ್ ಸೇನಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಶ್ವೇತ ಭವನದ ಮೂಲಗಳು ಸ್ಪಷ್ಟನೆ ನೀಡಿವೆ.

ಅಲ್-ಖುರೈಶಿಯನ್ನು 2004ರಲ್ಲಿ ಇರಾಕ್‌ನಲ್ಲಿ ಯುಎಸ್ ನಡೆಸುತ್ತಿರುವ ಕ್ಯಾಂಪ್ ಬುಕ್ಕಾದಲ್ಲಿ ಬಂಧಿಸಲಾಗಿತ್ತು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಇದಷ್ಟೇ ಅಲ್ಲದೇ ಅಲ್-ಖುರೈಶಿಯು ಮಾಜಿ ಐಸಿಸ್ ನಾಯಕನಾದ ಅಬು ಬಕರ್ ಅಲ್-ಬಾಗ್ದಾದಿಯ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು ಎಂದು ತಿಳಿದುಬಂದಿದೆ.

2019ರ ಅಕ್ಟೋಬರ್‌ನಲ್ಲಿ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಅಬು ಬಕರ್ ಅಲ್-ಬಾಗ್ದಾದಿ ಹತ್ಯೆಯಾದ ನಂತರ ಐಸಿಸ್​ನ ಹೊಣೆಗಾರಿಕೆಯನ್ನು ಅಲ್-ಖುರೈಶಿ ವಹಿಸಿಕೊಂಡಿದ್ದನೆಂದು ತಿಳಿದುಬಂದಿದೆ.

ಇದನ್ನೂ ಓದಿ:ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಪಾಕಿಸ್ತಾನದಲ್ಲಿ ಸಿಖ್ ಸಮುದಾಯ ಪ್ರತಿಭಟನೆ

Last Updated : Feb 3, 2022, 7:49 PM IST

ABOUT THE AUTHOR

...view details