ಕರ್ನಾಟಕ

karnataka

ETV Bharat / international

ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ...ಅತ್ಯಾಧುನಿಕ ಹೆಲಿಕಾಪ್ಟರ್ ನೀಡಲು ಯುಎಸ್​ ಒಪ್ಪಿಗೆ - ವಾಷಿಂಗ್ಟನ್

ಯುದ್ಧದ ಸಂದರ್ಭದಲ್ಲಿ ಸೇನೆಗೆ ಮತ್ತಷ್ಟು ಬಲ ತುಂಬಲಿರುವ ಈ ಅತ್ಯಾಧುನಿಕ ಹೆಲಿಕಾಪ್ಟರ್​​ಗಳು ಭಾರತದ ದಶಕಗಳ ಬೇಡಿಕೆಯಾಗಿತ್ತು

ಹೆಲಿಕಾಪ್ಟರ್

By

Published : Apr 3, 2019, 12:42 PM IST

ವಾಷಿಂಗ್ಟನ್​​:ಅಮೆರಿಕ ನಿರ್ಮಿತ 24 ಎಂ ಹೆಚ್​​-60 ರೋಮಿಯೋ ಸೀಹಾಕ್​​ ಹೆಲಿಕಾಪ್ಟರ್​​ಗಳನ್ನು ಭಾರತಕ್ಕೆ ನೀಡಲು ಅಮೆರಿಕ ಮುಂದಾಗಿದೆ ಎಂದು ವೈಟ್​ಹೌಸ್ ಮೂಲಗಳು ಖಚಿತಪಡಿಸಿವೆ.

ಯುದ್ಧದ ಸಂದರ್ಭದಲ್ಲಿ ಸೇನೆಗೆ ಮತ್ತಷ್ಟು ಬಲ ತುಂಬಲಿರುವ ಈ ಅತ್ಯಾಧುನಿಕ ಹೆಲಿಕಾಪ್ಟರ್​​ಗಳು ಭಾರತದ ದಶಕಗಳ ಬೇಡಿಕೆಯಾಗಿತ್ತು. ಸದ್ಯ ಟ್ರಂಪ್ ಸರ್ಕಾರ ಭಾರತಕ್ಕೆ ಹೆಲಿಕಾಪ್ಟರ್ ನೀಡಲು ಮುಂದಾಗಿದ್ದು ಇದಕ್ಕಾಗಿ ಭಾರತ 2.4 ಬಿಲಿಯನ್​ ಅಮೆರಿಕನ್ ಡಾಲರ್​ ನೀಡಲಿದೆ.

ಪ್ರಸ್ತುತ ಅಮೆರಿಕ ನೀಡಲು ಮುಂದಾಗಿರುವ ಹೆಲಿಕಾಪ್ಟರ್​​ಗಳು ಆಧುನಿಕ ಹಾಗೂ ಉತ್ತಮ ದರ್ಜೆಯದ್ದಾಗಿದೆ. ಶತ್ರು ಪಡೆಯಯನ್ನು ಯುದ್ಧದಲ್ಲಿ ಹಿಮ್ಮೆಟ್ಟಿಸಲು ಸಾಕಷ್ಟು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details