ಕರ್ನಾಟಕ

karnataka

ETV Bharat / international

ಶ್ವೇತಭವನದ ಹೊರಗೆ ಶೂಟೌಟ್: ಅಧ್ಯಕ್ಷರನ್ನ ಸುದ್ದಿಗೋಷ್ಠಿಯಿಂದ ಕರೆದೊಯ್ದ ಸಿಬ್ಬಂದಿ - ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಶ್ವೇತಭವನದ ಹೊರಗೆ ಗುಂಡಿನ ದಾಳಿ ನಡೆದ ಹಿನ್ನೆಲೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ವೈರಸ್ ಬ್ರೀಫಿಂಗ್ ಪ್ರಾರಂಭಿಸುತ್ತಿದ್ದಾಗಲೇ, ಅವರನ್ನು ಕೊಠಡಿಯಿಂದ ಹೊರಗೆ ಕರೆದೊಯ್ಯಲಾಯಿತು.

trump
trump

By

Published : Aug 11, 2020, 11:00 AM IST

Updated : Aug 11, 2020, 11:27 AM IST

ವಾಷಿಂಗ್ಟನ್:ಶ್ವೇತಭವನದ ಹೊರಗೆ ಗುಂಡಿನ ದಾಳಿ ನಡೆದ ಹಿನ್ನೆಲೆ, ಅಮೆರಿಕಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಮಧ್ಯಾಹ್ನ ಕೊರೊನಾ ವೈರಸ್ ಬ್ರೀಫಿಂಗ್ ಪ್ರಾರಂಭಿಸುತ್ತಿದ್ದಾಗಲೇ, ಅವರನ್ನು ಯುಎಸ್ ಸೀಕ್ರೆಟ್ ಸರ್ವಿಸ್ ಏಜೆಂಟರು ಶ್ವೇತಭವನದ ಬ್ರೀಫಿಂಗ್ ಕೊಠಡಿಯಿಂದ ಹೊರಗೆ ಕರೆದೊಯ್ದರು.

ಅಧ್ಯಕ್ಷರನ್ನ ಸುದ್ದಿಗೋಷ್ಠಿಯಿಂದ ಕರೆದೊಯ್ದ ಸಿಬ್ಬಂದಿ

ಕೆಲ ನಿಮಿಷಗಳ ನಂತರ ಹಿಂತಿರುಗಿದ ಅವರು, ಶ್ವೇತಭವನದ ಹೊರಗೆ ನಡೆದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದರು.

ಗುಂಡು ಹಾರಿಸಿದ ವ್ಯಕ್ತಿಯು ಶಸ್ತ್ರಸಜ್ಜಿತನಾಗಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಟ್ರಂಪ್ ಹೇಳಿದರು. ಘಟನೆಯ ನಂತರ ಶ್ವೇತಭವನವನ್ನು ಲಾಕ್​ಡೌನ್ ಮಾಡಲಾಗಿದೆ.

Last Updated : Aug 11, 2020, 11:27 AM IST

ABOUT THE AUTHOR

...view details