ಕರ್ನಾಟಕ

karnataka

ETV Bharat / international

ಅಮೆರಿಕ ಅಧ್ಯಕ್ಷ ಟ್ರಂಪ್​ಗೆ ಭ್ರಾತೃ ವಿಯೋಗ... ಕಿರಿಯ ಸಹೋದರ ರಾಬರ್ಟ್ ಮೃತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸಹೋದರ ರಾಬರ್ಟ್​ ಎಸ್ ಟ್ರಂಪ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದೆ.

Robert S Trump
ರಾಬರ್ಟ್​ ಎಸ್ ಟ್ರಂಪ್

By

Published : Aug 16, 2020, 1:55 PM IST

ನ್ಯೂಯಾರ್ಕ್​ (ಅಮೆರಿಕ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹೋದರ ರಾಬರ್ಟ್​ ಎಸ್ ಟ್ರಂಪ್ ತಮ್ಮ 71ನೇ ವಯಸ್ಸಿನಲ್ಲಿ ನ್ಯೂಯಾರ್ಕ್​ನ ಪ್ರಿಸ್​ಬೈಟೇರಿಯನ್​ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಶ್ವೇತ ಭವನ ಈ ವಿಚಾರವನ್ನು ದೃಢಪಡಿಸಿದ್ದು, ಸಾವನ್ನಪ್ಪಿರುವುದಕ್ಕೆ ಕಾರಣ ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್​, ಅವನು ನನ್ನ ಸಹೋದರ ಮಾತ್ರವಲ್ಲ. ಆತ್ಮೀಯ ಸ್ನೇಹಿತನೂ ಕೂಡ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವನ ಅನುಪಸ್ಥಿತಿ ನಮ್ಮನ್ನ ಕಾಡುತ್ತಿದೆ. ಅವನ ನೆನಪುಗಳು ನನ್ನ ಹೃದಯದಲ್ಲಿ ಹಚ್ಚ ಹಸಿರಾಗಿರುತ್ತವೆ. ಆದರೆ ಮತ್ತೆ ಅವನನ್ನು ಭೇಟಿಯಾಗಲಿದ್ದೇವೆ. ನಿನ್ನ ಆತ್ಮ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಟ್ರಂಪ್​ ಭಾವುಕರಾಗಿದ್ದಾರೆ.

ಮೆದುಳಿನ ರಕ್ತಸ್ರಾವದಿಂದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಟ್ರಂಪ್​ ಕುಟುಂಬದ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details