ಕರ್ನಾಟಕ

karnataka

ETV Bharat / international

ಖಾಸಗಿ ಸಂಪತ್ತು ಮರೆಮಾಚಲು ಯುಕೆ ಸರ್ಕಾರಕ್ಕೆ ಒತ್ತಡ ಹೇರಿದ್ದ ರಾಣಿ ಎಲಿಜಬೆತ್-2!

ಪಾರದರ್ಶಕತೆ ಕಾನೂನುಗಳಲ್ಲಿ ಬಕಿಂಗ್​ಹ್ಯಾಂ ಅರಮನೆಗೆ ವಿನಾಯಿತಿ ನೀಡುವಂತೆ ರಾಣಿ ಎಲಿಜಬೆತ್ II ಯುಕೆ ಸರ್ಕಾರವನ್ನು ಒತ್ತಾಯಿಸಿದ್ದರು ಎಂದು ವರದಿಯಾಗಿದೆ.

queen
queen

By

Published : Feb 8, 2021, 6:57 PM IST

ಲಂಡನ್ (ಯು.ಕೆ):ರಾಣಿ ಎಲಿಜಬೆತ್ II 1970ರ ದಶಕದಲ್ಲಿ ಪಾರದರ್ಶಕತೆ ಕಾನೂನುಗಳಲ್ಲಿ ಬಕಿಂಗ್​ಹ್ಯಾಂ ಅರಮನೆಗೆ ವಿನಾಯಿತಿ ನೀಡುವಂತೆ ಯುಕೆ ಸರ್ಕಾರವನ್ನು ಒತ್ತಾಯಿಸಿದ್ದರು ಎಂದು ನ್ಯಾಷನಲ್ ಆರ್ಕೈವ್​ನಲ್ಲಿನ ದಾಖಲೆಗಳನ್ನು ಉಲ್ಲೇಖಿಸಿ ದಿ ಗಾರ್ಡಿಯನ್ ವರದಿ ಮಾಡಿದೆ.

ಯುನೈಟೆಡ್ ಕಿಂಗ್‌ಡಂನ ನ್ಯಾಷನಲ್ ಆರ್ಕೈವ್ಸ್‌ನಲ್ಲಿ ಕಂಡುಬರುವ ಅಧಿಕಾರಿಗಳ ನಡುವಿನ ಪತ್ರ ವ್ಯವಹಾರಗಳು, ರಾಣಿಯ ಎಸ್ಟೇಟ್ ಮತ್ತು ಕಂಪೆನಿಗಳಲ್ಲಿನ ಅವರ ಪಾಲುಗಳ ಕುರಿತು ಗೌಪ್ಯತೆ ಕಾಪಾಡಿಕೊಳ್ಳಲು ಒಂದು ಷರತ್ತು ಸೇರಿಸಬೇಕೆಂದು ಅಂದು ಅವರು ಒತ್ತಾಯಿಸಿದ್ದರು ಎಂದು ವರದಿ ಬಹಿರಂಗಪಡಿಸುತ್ತದೆ.

ದೇಶದ ಹಣಕಾಸು ಸಂಸ್ಥೆಗಳಲ್ಲಿ ಪಾರದರ್ಶಕ ವ್ಯವಹಾರವನ್ನು ನಿಭಾಯಿಸಲು ಮಸೂದೆಯನ್ನು ರೂಪಿಸುವಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳು ಮತ್ತು ಶಾಸಕರ ಮೇಲೆ ಒತ್ತಡ ಹೇರಲು ರಾಣಿಯು ವಕೀಲ ಮ್ಯಾಥ್ಯೂ ಫಾರೆರ್ ಅವರನ್ನು ನಿಯೋಜಿಸಿದ್ದು, ಅವರ ಮುಖೇನ ಷರತ್ತು ಸೇರಿಸಬೇಕೆಂದು ಒತ್ತಾಯಿಸಿದ್ದರು.

ABOUT THE AUTHOR

...view details