ಮಿನ್ನಿಯಾಪೊಲೀಸ್(ಅಮೆರಿಕ): ಪೊಲೀಸರು ನೀಡಿದ ಹಿಂಸೆಯಿಂದ ಕಪ್ಪು ವರ್ಣೀಯ ಸಾವಿಗೀಡಾದ ನಂತರ ಆಕ್ರೋಶ ಭುಗಿಲೆದ್ದಿದ್ದು ಪ್ರತಿಭಟನಾಕಾರರು ಗುರುವಾರ ಮಿನ್ನಿಯಾಪೊಲೀಸ್ ನಗರದ ಠಾಣೆ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ.
ಪ್ರತಿಭಟನಾಕಾರರು ಪೊಲೀಸ್ ಠಾಣೆಯತ್ತ ನುಗ್ಗುತ್ತಿರುವುದು, ಕಟ್ಟಡದ ಒಳಗೆ ಪ್ರವೇಶ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳ ಲೈವ್ಸ್ಟ್ರೀಮ್ನಲ್ಲಿ ಪ್ರಸಾರವಾಗಿವೆ. ಇದ್ದಂಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಎಲ್ಲರೂ ಓಡಿ ಹೋಗುವ ದೃಶ್ಯಗಳು ದಾಖಲಾಗಿವೆ.
ಠಾಣೆಗೆ ಬೆಂಕಿ ಹಚ್ಚಿದ ಪ್ರತಿಭಟಾಕಾರರು ಪೊಲೀಸರಿಂದ ಬಂಧಿಸಲ್ಪಟ್ಟ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯ ವ್ಯಕ್ತಿ ಕುತ್ತಿಗೆ ಮೇಲೆ ಅಧಿಕಾರಿಯೊಬ್ಬರು ತನ್ನ ಮೊಣಕಾಲಿನಿಂದ ಒತ್ತುತ್ತಿದ್ದ, ಈ ವೇಳೆ ಜಾರ್ಜ್ ಫ್ಲಾಯ್ಡ್ ನನಗೆ ಉಸಿರಾಡಲು ಆಗುತ್ತಿಲ್ಲ ಎಂದು ಬೇಡಿಕೊಳ್ಳುತ್ತಿದ್ದ. ಸ್ಥಳೀಯರು ಕೂಡ ಪೊಲೀಸರನ್ನು ಎಷ್ಟು ಒತ್ತಾಯಿಸಿದರೂ ಅಧಿಕಾರಿ ಕಾಲು ತೆಗೆಯಲಿಲ್ಲ. ಸ್ಪಲ್ಪ ಸಮಯದ ನಂತರ ಆತ ಮಾತೂ ಆಡಲಿಲ್ಲ ಅತ್ತಿತ್ತ ಕದಲುವುದನ್ನೂ ನಿಲ್ಲಿಸಿ ನಡು ರಸ್ತೆಯಲ್ಲೆ ಸಾವಿಗೀಡಾದ. ಈ ಘಟನೆಯ ಸಂಪೂರ್ಣ ದೃಶ್ಯವನ್ನು ವ್ಯಕ್ತಿಯೋರ್ವ ಸೆರೆಹಿಡಿದಿದ್ದ.
ಪೊಲೀಸರ ವರ್ತನೆ ವಿರುದ್ಧ ಪ್ರತಿಭಟನೆ ಕಪ್ಪು ವರ್ಣೀಯ ವ್ಯಕ್ತಿಯನ್ನು ಬಿಳಿ ಅಧಿಕಾರಿ ಕ್ರೂರವಾಗಿ ನಡೆಸಿಕೊಂಡಿದ್ದು, ಜನಾಂಗೀಯ ಕಲಹದ ರೂಪ ಪಡೆೆದು ಭಾರಿ ವಿರೋಧ ವ್ಯಕ್ತವಾಗಿದೆ. ಕಳೆದ ಮೂರು ದಿನಗಳಿಂದ ಘಟನೆ ಖಂಡಿಸಿ ಮಿನ್ನಿಯಾ ನಗರದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಭಾರಿ ಪ್ರತಿಭಟನೆ ಹಿನ್ನೆಯಲ್ಲಿ ನಗರದಲ್ಲಿ ಹಲವು ವ್ಯವಹಾರಗಳು ಸ್ಥಗಿತಗೊಂಡಿದ್ದು, ಬಸ್ ಮತ್ತು ರೈಲು ಸಂಚಾರವೂ ಬಂದ್ ಆಗಿದೆ.