ನ್ಯೂಯಾರ್ಕ್: ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು. ಭಯೋತ್ಪಾದನೆಯನ್ನ ರಾಜಕೀಯ ಸಾಧನವಾಗಿ ಬಳಕೆ ಮಾಡಿಕೊಳ್ಳುತ್ತಿರುವ ದೇಶಗಳು ಮುಂಬರುವ ದಿನಗಳಲ್ಲಿ ಅದರಿಂದಲೇ ತೊಂದರೆಗೊಳಗಾಗುತ್ತವೆ ಎಂಬ ಎಚ್ಚರಿಕೆಯನ್ನು ನೀಡಿದರು.
ಪಾಕ್, ಚೀನಾ ವಿರುದ್ಧ ನಮೋ ಪರೋಕ್ಷ ವಾಗ್ದಾಳಿ ಕೆಲವೊಂದು ದೇಶಗಳಿಗೆ ಭಯೋತ್ಪಾದನೆ ರಾಜಕೀಯ ಆಯುಧವಾಗಿ ಬಳಕೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಯೋತ್ಪಾದನೆ ಅವರಿಗೇ ಮಾರಕವಾಗಲಿದೆ ಎಂದರು. ಅಫ್ಘಾನಿಸ್ತಾನದ ಉಗ್ರರು ಹಾಗೂ ಅಲ್ಲಿನ ಭೂಮಿ ಬಳಕೆ ಮಾಡಿಕೊಳ್ಳಬೇಡಿ ಎಂದು ನಮೋ ಸೂಚನೆ ನೀಡಿದರು.
ನೆರೆಯ ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ನಮೋ, ಭಯೋತ್ಪಾದನೆ ರಾಜಕೀಯ ಅಸ್ತ್ರದಂತೆ ಬಳಕೆಯಾಗುತ್ತಿದ್ದು, ಆದರು ಆ ರೀತಿ ಆಗಬಾರದು ಎಂದು ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದರು. ಅಫ್ಘಾನಿಸ್ತಾನದಲ್ಲಿ ಸದ್ಯದ ಪರಿಸ್ಥಿತಿ ಗಂಭೀರವಾಗಿದ್ದು, ಇದೀಗ ಅಲ್ಲಿನ ಮಹಿಳೆಯರು, ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತರಿಗೆ ರಕ್ಷಣೆ ಬೇಕು. ಅಲ್ಲಿನ ಪರಿಸ್ಥಿತಿ ಬೇರೆ ಉದ್ದೇಶಗಳಿಗೆ ಬಳಕೆ ಆಗಬಾರದು ಎಂದು ಹೇಳಿದರು.
ಇದನ್ನೂ ಓದಿರಿ:ಭಾರತದಲ್ಲಿ ಬಂದು ಕೋವಿಡ್ ಲಸಿಕೆ ತಯಾರಿಸಿ ; ವಿಶ್ವಕ್ಕೆ ನಮೋ ಆಹ್ವಾನ
ವೈವಿಧ್ಯತೆಯೇ ನಮ್ಮ ಪ್ರಜಾಪ್ರಭುತ್ವದ ಹೆಗ್ಗುರುತು ಆಗಿದ್ದು, ಪ್ರಜಾಪ್ರಭುತ್ವದ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತದಿಂದ ನಾವು ಬಂದಿದ್ದೇವೆ. ನಮಗೆ 6 ಸಾವಿರ ವರ್ಷಗಳ ಇತಿಹಾಸವಿದೆ. ಏಕತಾ ಮಾನವತಾವಾದವೇ ನಮ್ಮ ಮೂಲ ಮಂತ್ರ ಎಂದರು. ಇದೇ ವೇಳೆ, ವಿಶ್ವದ ಶಾಂತಿ ಹಾಗೂ ಸೌಹಾರ್ದತೆ ಯಾವುದೇ ಭಂಗ ಬರದಂತೆ ನಾವೆಲ್ಲ ಶ್ರಮಿಸಬೇಕಿದೆ ಎಂದು ವಿಶ್ವ ಸಮುದಾಯಕ್ಕೆ ಕರೆ ನೀಡಿದರು.