ಕರ್ನಾಟಕ

karnataka

ETV Bharat / international

ವಿಶ್ವಸಂಸ್ಥೆಯಲ್ಲಿ ಪಾಕ್​​​ಗೆ ಮತ್ತೆ ಮುಖಭಂಗ: ಭಯೋತ್ಪಾದಕರ ಪಟ್ಟಿಗೆ ಭಾರತೀಯರನ್ನು ಸೇರಿಸುವ ಯತ್ನ ವಿಫಲ - ವಿಶ್ವಸಂಸ್ಥೆಯ 1267 ಸಮಿತಿ

ವಿಶ್ವಸಂಸ್ಥೆಯ 1267 ಸಮಿತಿಯಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಯಲ್ಲಿ ಇಬ್ಬರು ಭಾರತೀಯರ ಹೆಸರನ್ನು ಸೇರಿಸುವ ಪ್ರಯತ್ನದಲ್ಲಿ ಪಾಕಿಸ್ತಾನ ವಿಫಲವಾಗಿದೆ.

Pakistan's efforts to designate 2 Indians as terrorists blocked at UNSC
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ

By

Published : Sep 3, 2020, 9:51 AM IST

ನ್ಯೂಯಾರ್ಕ್: ಭಯೋತ್ಪಾದನೆ ಕುರಿತು 1267 ವಿಶೇಷ ಕಾರ್ಯವಿಧಾನದಡಿ ಧಾರ್ಮಿಕ ಬಣ್ಣ ನೀಡುವ ಮೂಲಕ ರಾಜಕೀಯಗೊಳಿಸುವ ಪಾಕಿಸ್ತಾನದ ಪ್ರಯತ್ನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ವಿಫಲಗೊಳಿಸಿದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರೂಮೂರ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆಯ 1267 ಭಯೋತ್ಪಾದನಾ ನಿಗ್ರಹ ನಿರ್ಬಂಧಗಳ ಸಮಿತಿಯಡಿಯಲ್ಲಿ ಅಂಗರಾ ಅಪ್ಪಾಜಿ ಮತ್ತು ಗೋಬಿಂದ ಪಟ್ನಾಯಕ್ ಎಂಬ ಇಬ್ಬರು ಭಾರತೀಯರನ್ನು ನಿಯೋಜಿತ ಭಯೋತ್ಪಾದಕ ಕಾರ್ಯಕರ್ತರಾಗಿ ಪಟ್ಟಿ ಮಾಡುವ ಕ್ರಮವನ್ನು ಪಾಕಿಸ್ತಾನ ಪ್ರಾರಂಭಿಸಿತ್ತು.

ಯುಎಸ್, ಯುಕೆ, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ನೇತೃತ್ವದ ಯುಎನ್‌ಎಸ್‌ಸಿ ತನ್ನ ಪಾಕಿಸ್ತಾನದ ಹಕ್ಕುಗಳನ್ನು ತಿರಸ್ಕರಿಸಿವೆ ಮತ್ತು ಈ ಇಬ್ಬರು ಭಾರತೀಯರನ್ನು ಭಯೋತ್ಪಾದಕರು ಎಂದು ಘೋಷಿಸಲು ಪಾಕಿಸ್ತಾನಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿವೆ.

'ಭಯೋತ್ಪಾದನೆ ಕುರಿತು 1267 ವಿಶೇಷ ಕಾರ್ಯವಿಧಾನದಡಿ ಧಾರ್ಮಿಕ ಬಣ್ಣ ನೀಡುವ ಮೂಲಕ ರಾಜಕೀಯಗೊಳಿಸುವ ಪಾಕಿಸ್ತಾನದ ಪ್ರಯತ್ನವನ್ನು ಯುಎನ್ ಸೆಕ್ಯುರಿಟಿ ಕೌನ್ಸಿಲ್ ವಿಫಲಗೊಳಿಸಿದೆ. ಪಾಕಿಸ್ತಾನದ ಈ ಪ್ರಯತ್ನವನ್ನು ನಿರ್ಬಂಧಿಸಿದ ಎಲ್ಲಾ ಕೌನ್ಸಿಲ್ ಸದಸ್ಯರಿಗೆ ಧನ್ಯವಾದಗಳು' ಎಂದು ಟಿ.ಎಸ್.ತಿರುಮೂರ್ತಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಈ ಕ್ರಮವು ಕಳೆದ ವರ್ಷ ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್​ನನ್ನು 1267 ಸಮಿತಿಯು ಜಾಗತಿಕ ಭಯೋತ್ಪಾದಕನಾಗಿ ಪಟ್ಟಿ ಮಾಡುವುದರಲ್ಲಿ ಭಾರತದ ಯಶಸ್ಸಿಗೆ ಪ್ರತೀಕಾರವೆಂದು ಹೇಳಲಾಗಿದೆ.

ABOUT THE AUTHOR

...view details