ಪೋರ್ಟ್-ಔ-ಪ್ರಿನ್ಸ್: ಕೆರಿಬಿಯನ್ ಸಮುದ್ರ ತೀರದಲ್ಲಿರುವ ಪುಟ್ಟ ದೇಶ ಹೈಟಿಯಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವಿನ ಸಂಖ್ಯೆ 1,419 ತಲುಪಿದೆ. ಪ್ರಕೃತಿ ವಿಕೋಪದಲ್ಲಿ 6000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಕೆರಿಬಿಯನ್ ರಾಷ್ಟ್ರದ ನಾಗರಿಕ ರಕ್ಷಣಾ ಸಂಸ್ಥೆ ಸೋಮವಾರ ತಿಳಿಸಿದೆ.
ಭೂಕಂಪಕ್ಕೆ ತತ್ತರಿಸಿದ ಹೈಟಿ: ಸಾವಿನ ಸಂಖ್ಯೆ 1,419ಕ್ಕೆ ಏರಿಕೆ, 6000 ಮಂದಿಗೆ ಗಾಯ - ಭೂಕಂಪನ
ಹೈಟಿಯಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವಿನ ಸಂಖ್ಯೆ 1,419 ತಲುಪಿದ್ದು, 6000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭೂಕಂಪಕ್ಕೆ ತತ್ತರಿಸಿದ ಹೈಟಿ
ಭೂಕಂಪನದಿಂದ ಈಗಾಗಲೇ 2,868 ಮನೆಗಳು ನಾಶವಾಗಿದ್ದು, 5,410ಕ್ಕೂ ಹೆಚ್ಚು ಮನೆಗಳು ತೀವ್ರ ಸ್ವರೂಪದಲ್ಲಿ ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ.
ಭೂಕಂಪನದ ಮಧ್ಯೆ ಕಳೆದ ರಾತ್ರಿಯಿಂದ ಭಾರಿ ಮಳೆ, ಗಾಳಿ, ಮಣ್ಣು ಕುಸಿತದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಪ್ರದೇಶಗಳಲ್ಲಿ 38 ಸೆಂಟಿಮೀಟರ್ ಮಳೆಯಾಗಿದೆ ಎನ್ನಲಾಗ್ತಿದೆ.