ನ್ಯೂಯಾರ್ಕ್: ಟಿಕ್ ಟಾಕ್ನಲ್ಲಿ ತನ್ನ ಅಗಲವಾದ ಬಾಯಿಯನ್ನು ಬಳಸಿಕೊಂಡು ವಿಚಿತ್ರ ಮತ್ತು ವಿಶೇಷ ವಿಡಿಯೋಗಳ ಪ್ರಸಿದ್ಧಿಯಾಗಿದ್ದ ಅಮೆರಿಕಾದ ಹಾಸ್ಯಗಾರ್ತಿ, ಇದೀಗ ವಿಶ್ವದಲ್ಲಿ ಅತ್ಯಂತ ವಿಸ್ತೀರ್ಣವಾದ ಬಾಯಿಯನ್ನು ಹೊಂದಿರುವ ಮಹಿಳೆ ಎಂಬ ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ.
ಅಮೆರಿಕಾದ ಕನೆಕ್ಟಿಕಟ್ನಲ್ಲಿ ವಾಸಿಸುವ 31 ವರ್ಷದ ಸಮಂತಾ ರ್ಯಾಮ್ಸ್ಡೆಲ್ ಎಂಬ ಮಹಿಳೆ ತಮ್ಮ ಬಾಯಿಯನ್ನು 6.52 ಸೆಂಟಿ ಮೀಟರ್ಗಳಷ್ಟು ವಿಸ್ತರಿಸಲ್ಲರು. ವಿಶ್ವ ಗಿನ್ನೆಲ್ ದಾಖಲೆಯ ಪ್ರಕಾರ ಸ್ಯಾಮ್ ವಿಶ್ವದ ಅತ್ಯಂತ ಅಗಲವಾದ ಬಾಯಿಯನ್ನು ಹೊಂದಿರುವ ಮಹಿಳೆ ಎಂಬುದು ಸಾಬೀತಾಗಿದೆ. ಈಕೆ ಒಂದು ಸೇಬಿನ ಹಣ್ಣು, ಬರ್ಗರ್ ಒಮ್ಮೆಲೆ ಬಾಯಿಗೆ ಹಾಕಿಕೊಂಡು ತಿನ್ನುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಹಲವಾರು ವಿಡಿಯೋಗಳನ್ನು ಮಾಡಿದ್ದು, ಇವೆಲ್ಲವೂ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿವೆ.