ಬ್ರೆಜಿಲ್:ಅಕ್ರಮ ಮರಳುಗಾರಿಕೆಯಿಂದ ಬ್ರೆಜಿಲ್‌ನ ಅಮೆಜಾನ್ ಅರಣ್ಯ ನಾಶ ಪ್ರಮಾಣ ಕಳೆದ ತಿಂಗಳಿನಲ್ಲಿ ತೀವ್ರವಾಗಿ ಏರಿಕೆ ಕಂಡಿದೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
2019 ರ ಏಪ್ರಿಲ್‌ನಲ್ಲಿ 248 ಚದರ ಕಿ.ಮೀ. ನಾಶವಾಗಿದ್ದ ಅರಣ್ಯ 2020ರ ಏಪ್ರಿಲ್‌ನಲ್ಲಿ 405 ಚದರ ಕಿ.ಮೀ. ನಾಶವಾಗಿದೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಇನ್ನು ಕೇವಲ ಜನವರಿ ಮತ್ತು ಏಪ್ರಿಲ್ ತಿಂಗಳ ಅಂತರದಲ್ಲಿ ಒಟ್ಟು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶೇಕಡ 55ರಷ್ಟನ್ನು(1,202 ಚದರ ಕಿ.ಮೀ) ನಾಶ ಮಾಡಲಾಗಿದೆ.
ಜೈರ್ ಬೋಲ್ಸನಾರೊ ಬ್ರೆಸಿಲ್ನ ಅಧಿಕಾರ ವಹಿಸಿಕೊಂಡಾಗಿನಿಂದ ಈ ಪ್ರದೇಶದಲ್ಲಿ ಅರಣ್ಯ ನಾಶ ಹೆಚ್ಚಾಗಿದೆ ಎನ್ನಲಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಅರಣ್ಯ ಸಂರಕ್ಷಣೆಗೆ ಕಡಿಮೆ ಜನರನ್ನು ನೇಮಿಸಲಾಗಿದೆ ಎಂದು ಸಂರಕ್ಷಣಾ ಗುಂಪುಗಳು ತಿಳಿಸಿವೆ. ಇನ್ನು ದಕ್ಷಿಣ ಅಮೆರಿಕದಲ್ಲಿ ಬ್ರೆಜಿಲ್ ಹೆಚ್ಚು ಹಾನಿಗೊಳಗಾದ ಭೂ ಭಾಗ ಎಂದು ಹೇಳಲಾಗಿದೆ.