ವಾಷಿಂಗ್ಟನ್: ಚೀನಾ - ಭಾರತ ಗಡಿ ಬಿಕ್ಕಟ್ಟಿನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವ ಭಾರತದ ದೀರ್ಘಕಾಲದ ಪ್ರಯತ್ನಗಳ ಕುರಿತು ಚೀನಾ ಕಡಿಮೆ ಗೌರವ ಹೊಂದಿದೆ ಎಂದು ದಕ್ಷಿಣ ಏಷ್ಯಾದ ಅಮೆರಿಕದ ಉನ್ನತ ವೀಕ್ಷಕರಾದ ಆಶ್ಲೇ ಟೆಲ್ಲಿಸ್ ಬಹಿರಂಗಪಡಿಸಿದ್ದಾರೆ.
ಯಥಾಸ್ಥಿತಿ ಕಾಪಾಡುವ ಭಾರತದ ಪ್ರಯತ್ನಗಳ ಕುರಿತು ಚೀನಾಗೆ ಗೌರವವಿಲ್ಲ: ಆಶ್ಲೇ ಟೆಲ್ಲಿಸ್ - ಆಶ್ಲೇ ಟೆಲ್ಲಿಸ್
ಭಾರತದ ಹಕ್ಕಿರುವ ಭೂಪ್ರದೇಶದ ಭಾಗಗಳನ್ನು ವಶಪಡಿಸಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ. ಬಿಕ್ಕಟ್ಟಿನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವ ಭಾರತದ ಪ್ರಯತ್ನಗಳ ಕುರಿತು ಚೀನಾ ಕಡಿಮೆ ಗೌರವ ಹೊಂದಿದೆ ಎಂದು ಆಶ್ಲೇ ಟೆಲ್ಲಿಸ್ ಬರೆದಿದ್ದಾರೆ.
indo china
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಭಾರತದ ಆಂತರಿಕ ಸಮಸ್ಯೆಗಳನ್ನು ಪ್ರಚೋದಿಸುವ ಮೂಲಕ ಚೀನಾ ಭಾರತಕ್ಕೆ ಸಂಕಷ್ಟಗಳನ್ನೊಡ್ಡುತ್ತಿದೆ ಎಂದು ಆಶ್ಲೇ ಟೆಲ್ಲಿಸ್ ತಮ್ಮ ಸಂಶೋಧನಾ ಪ್ರಬಂಧದಲ್ಲಿ ಬರೆದಿದ್ದಾರೆ.
ಭಾರತದ ಹಕ್ಕಿರುವ ಭೂಪ್ರದೇಶದ ಭಾಗಗಳನ್ನು ವಶಪಡಿಸಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ. ಲಡಾಖ್ನ ಅನೇಕ ಪ್ರದೇಶಗಳಲ್ಲಿ ಚೀನಾ ತನ್ನ ಸೇನೆಯ ಮೂಲಕ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿದೆ ಎಂದು ಟೆಲ್ಲಿಸ್ ಹೇಳಿದ್ದಾರೆ.