ಕರ್ನಾಟಕ

karnataka

ಮೈಕ್​​ ಪೊಂಪಿಯೋ ಸೇರಿ ಅಮೆರಿಕದ 28 ಅಧಿಕಾರಿಗಳಿಗೆ ಚೀನಾ ನಿರ್ಬಂಧ

By

Published : Jan 21, 2021, 1:56 PM IST

ಚೀನಾದ ಸಾರ್ವಭೌಮತೆಗೆ ಧಕ್ಕೆ ತಂದ ಆರೋಪದಲ್ಲಿ ಅಮೆರಿಕದ 28 ಅಧಿಕಾರಿಗಳಿಗೆ ಚೀನಾ ನಿರ್ಬಂಧ ಹೇರಿದ್ದು, ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

mike Pompeo
ಮೈಕ್ ಪೋಂಪಿಯೋ

ಬೀಜಿಂಗ್ (ಚೀನಾ):ಅಮೆರಿಕದಲ್ಲಿ ಹೊಸ ಅಧ್ಯಕ್ಷರ ಪದಗ್ರಹಣ ಬೆನ್ನಲ್ಲೇ ಸುಮಾರು 28 ಅಮೆರಿಕ ಮೂಲದ ಅಧಿಕಾರಿಗಳಿಗೆ ಚೀನಾ ನಿರ್ಬಂಧ ಹೇರಿದೆ. ನಿರ್ಬಂಧಕ್ಕೆ ಒಳಗಾದವರ ಪಟ್ಟಿಯಲ್ಲಿ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ಸ್ ಮೈಕ್ ಪೊಂಪಿಯೋ ಕೂಡಾ ಸೇರಿದ್ದಾರೆ.

ಚೀನಾದ ಸಾರ್ವಭೌಮತೆಗೆ ಧಕ್ಕೆ ತಂದ ಆರೋಪದಲ್ಲಿ ಅಮೆರಿಕದ ಅಧಿಕಾರಿಗಳ ಮೇಲೆ ನಿರ್ಬಂಧ ಹೇರಿರುವುದಾಗಿಚೀನಾದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದ್ದು, ಪೊಂಪಿಯೋ ಜೊತೆಗೆ ಟ್ರೇಡ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಪಾಲಿಸಿ ಕಚೇರಿಯ ನಿರ್ದೇಶಕ ಪೀಟರ್ ನವಾರ್ರೊ, ಮಾಜಿ ಭದ್ರತಾ ಸಲಹೆಗಾರ ರಾಬರ್ಟ್ ಓಬ್ರಿಯನ್, ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ವ್ಯವಹಾರಗಳ ಮಂಡಳಿಯ ಮಾಜಿ ಸಹಾಯಕ ಕಾರ್ಯದರ್ಶಿ ಡೇವಿಡ್ ಆರ್ ಸ್ಟೀವೆಲ್, ಮಾಜಿ ಭದ್ರತಾ ಉಪ ಸಲಹೆಗಾರ ಮ್ಯಾಥ್ಯೂ ಪೊಟಿಂಗರ್, ಆರೋಗ್ಯ ಮತ್ತು ಮಾನವ ಸೇವೆಗಳ ಮಾಜಿ ಕಾರ್ಯದರ್ಶಿ ಅಲೆಕ್ಸ್ ಅಜರ್ ಸೇರಿದಂತೆ 28 ಮಂದಿಯ ಮೇಲೆ ಚೀನಾ ನಿರ್ಬಂಧ ಹೇರಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಚೀನಾ ಸಂಬಂಧಿ ಕೆಲಸಗಳಿಂದಾಗಿ ಅಮೆರಿಕದ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳಿಂದಾಗಿ ಅವರ ಮೇಲೆ ನಿರ್ಬಂಧ ಹೇರಲಾಗಿದೆ. ಅವರು ಚೀನಾ ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಟ್ರಂಪ್​ ನಿಯಮ 'ಮುಸ್ಲಿಂ ಪ್ರಯಾಣ ನಿಷೇಧ'ಕ್ಕೆ ಅಂತ್ಯ ಹಾಡಿದ ಬೈಡನ್​

ಅಧಿಕಾರಿಗಳು ಮಾತ್ರವಲ್ಲದೇ ಅವರ ಕುಟುಂಬದವರಿಗೂ ಚೀನಾದ ಒಳಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಚೀನಾ ಮುಖ್ಯ ಭೂಪ್ರದೇಶ ಮಾತ್ರವಲ್ಲದೇ ಹಾಂಕಾಂಗ್, ಮಕಾವೋ ಪ್ರದೇಶಗಳಿಗೂ ಕೂಡಾ ಈ ನಿರ್ಬಂಧ ಅನ್ವಯಿಸುತ್ತದೆ.

ಚೀನಾದೊಂದಿಗೆ ಅಥವಾ ಚೀನಾದ ಕಂಪನಿಗಳೊಂದಿಗೆ ನಿರ್ಬಂಧಿಸಲ್ಪಟ್ಟ ಅಧಿಕಾರಿಗಳು ಇಟ್ಟುಕೊಂಡಿರುವ ವ್ಯವಹಾರ ಕೂಡಾ ರದ್ದಾಗಲಿದೆ. ಇದರ ಜೊತೆಗೆ ಭವಿಷ್ಯದಲ್ಲಿ ಚೀನಾ ಮೂಲದ ಯಾವುದೇ ಕಂಪನಿಯೊಂದಿಗೆ ವ್ಯವಹಾರ ನಡೆಸಲು ಚೀನಾ ಅನುಮತಿ ನೀಡುವುದಿಲ್ಲ.

ಜೋ ಬೈಡನ್ ಅಧಿಕಾರ ಸ್ವೀಕರಿಸಿ ಮರುದಿನವೇ ಚೀನಾ ಈ ನಿರ್ಧಾರ ತೆಗೆದುಕೊಂಡಿದ್ದು, ಚೀನಾದ ನಿರ್ಧಾರಕ್ಕೆ ಅಮೆರಿಕ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ABOUT THE AUTHOR

...view details