ಕರ್ನಾಟಕ

karnataka

Billionaire Blastoff: ಬಾಹ್ಯಾಕಾಶಕ್ಕೆ ಹಾರಲು ಬಿಲೇನಿಯರ್​ಗಳ ಸಿದ್ಧತೆ!

By

Published : Jul 10, 2021, 7:20 AM IST

ಬಾಹ್ಯಾಕಾಶದಲ್ಲಿ ಜಾಲಿರೈಡ್​ ಮಾಡಲು ಬಯಸುವವರಿಗೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಿಬ್ಬರು ಒಂದು ಸದಾವಕಾಶ ಸೃಷ್ಟಿಸಿದ್ದಾರೆ. ಆ ಮೂಲಕ ಅವರ ಕನಸನ್ನೂ ನನಸು ಮಾಡಿಕೊಂಡಿದ್ದಾರೆ.

Billionaire Blastoff
Billionaire Blastoff

ಕೇಪ್ ಕೆನವೆರಲ್ (ಅಮೆರಿಕ):ಬಿಲೇನಿಯರ್​ಗಳಾದ ವರ್ಜಿನ್ ಗ್ಯಾಲಸ್ಟಿಕ್ ಸಂಸ್ಥಾಪಕ ರಿಚರ್ಡ್​​​​​​​​ ಬ್ರಾನ್ಸನ್ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ ಬ್ಲೂ ಒರಿಜಿನ್ ಸಂಸ್ಥೆಯ ಸಂಸ್ಥಾಪಕ​ ಜೆಫ್​ ಬೆಜೋಸ್​​​ ರಾಕೆಟ್​ ಉಡಾವಣೆ ಮಾಡಲು ಮುಂದಾಗಿದ್ದಾರೆ. ಬಾಹ್ಯಾಕಾಶದಲ್ಲಿ ಜಾಲಿರೈಡ್​​ಗಳನ್ನು ಬಯಸುವ ಗ್ರಾಹಕರಿಗೆ ಇದು ಅನುಕೂಲವಾಗಲಿದೆ.

ಬಾಹ್ಯಾಕಾಶಕ್ಕೆ ಹಾರಲು ಬಿಲೇನಿಯರ್​ಗಳ ಸಿದ್ಧತೆ!

ಬ್ರಾನ್ಸನ್​ ಒಡೆತನದ ವಿಮಾನವು ಈಗಾಗಲೇ ಮೂರು ಬಾರಿ ಬಾಹ್ಯಾಕಾಶಕ್ಕೆ ಹಾರಿದೆ. ಬ್ರಾನ್ಸನ್​ಗಿಂತ ಬೆಜೋಸ್ ಐದು ಪಟ್ಟು ಹೆಚ್ಚಿನ ಪರೀಕ್ಷಾ ವಿಮಾನಗಳನ್ನು ಹೊಂದಿದ್ದಾರೆ. ಆದರೆ, ವಿಮಾನದಲ್ಲಿ ಈವರೆಗೆ ಯಾರೂ ಪ್ರಯಾಣ ಬೆಳೆಸಿಲ್ಲ. ಬಾಹ್ಯಾಕಾಶಕ್ಕೆ ರಾಕೆಟ್​ ಹಾರಿಸಿದ ನಾಲ್ಕು ನಿಮಿಷಗಳವರೆಗೆ ವಿಭಿನ್ನವಾದ ಅನುಭವ ಅನುಭವಿಸಿದ್ದು, ಇದನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ.

71 ನೇ ವರ್ಷಕ್ಕೆ ಕಾಲಿಟ್ಟಿರುವ ಬ್ರಾನ್ಸನ್​, ಪ್ರವಾಸಿಗರನ್ನು ರಾಕೆಟ್​ನಲ್ಲಿ ಬಾಹ್ಯಾಕಾಶಕ್ಕೆ ಕರೆದೊಯ್ಯುವ ಒಂದು ಸಣ್ಣ ಪ್ರಯತ್ನವಿದು ಎಂದಿದ್ದಾರೆ. ನಾನು ಚಿಕ್ಕವನಿದ್ದಾಗ ಬಾಹ್ಯಾಕಾಶಕ್ಕೆ ಹೋಗಲು ಬಯಸಿದ್ದೆ. ಆದರೆ, ನನಗೆ ಅವಕಾಶ ಸಿಗಲಿಲ್ಲ. ವರ್ಜಿನ್ ಗ್ಯಾಲಕ್ಸಿ ಸ್ಥಾಪಿಸಿದ 17 ವರ್ಷಗಳ ಬಳಿಕ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಅಮೆಜಾನ್‌ನ ಸಿಇಒ ಹುದ್ದೆಯಿಂದ ಕೆಳಗಿಳಿದಿರುವ 57 ವರ್ಷದ ಬೆಜೋಸ್, ಜೂನ್ ಆರಂಭದಲ್ಲಿ ತಮ್ಮ ನ್ಯೂ ಶೆಪರ್ಡ್ ರಾಕೆಟ್‌ನಲ್ಲಿ ಮೊದಲ ಪ್ರಯಾಣಿಕರಾಗಿ ಹಾರಾಟ ನಡೆಸುವುದಾಗಿ ಘೋಷಿಸಿದ್ದರು. ಕೋವಿಡ್​ ಹಿನ್ನೆಲೆ ಅದು ಸಾಧ್ಯವಾಗಿರಲಿಲ್ಲ.

ಬೆಜೋಸ್​, ನನಗೆ ಬಾಲ್ಯದಿಂದಲೂ ಬಾಹ್ಯಾಕಾಶಕ್ಕೆ ಪ್ರಯಾಣಿಸಬೇಕೆಂಬ ಆಸೆಯಿತ್ತು. ಆ ಬಗ್ಗೆ ತುಂಬಾ ಕನಸು ಕಟ್ಟಿಕೊಂಡಿದ್ದೆ. ಜುಲೈ 20 ರಂದು ನಾನು ನನ್ನ ಸಹೋದರಿಯೊಂದಿಗೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದೇನೆ. ಇದು ನನ್ನ ಜೀವನದ ಅತಿ ದೊಡ್ಡ ಸಾಹಸ ಎಂದು ಇನ್​​ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಕೆಟ್ ಉಡಾವಣೆಯಲ್ಲಿ ಬೆಜೋಸ್​ ಮತ್ತು ನನ್ನ ನಡುವೆ ಯಾವುದೇ ಪೈಪೋಟಿಯಿಲ್ಲ. ಸ್ಪರ್ಧೆಗಿಳಿಯುವುದಕ್ಕೆ ಇದು ಓಟದ ಸ್ಪರ್ಧೆಯಲ್ಲ ಎಂದು ಬ್ರಾನ್ಸನ್​ ಹೇಳಿದ್ದಾರೆ. ಇನ್ನೂ ಬ್ರಾನ್ಸನ್​ ಅವರ ಹಾರಾಟದ ಬಗ್ಗೆ ಬೆಜೋಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬ್ಲೂ ಒರಿಜಿನ್​ನಲ್ಲಿರುವ ಕೆಲವರು, ಕ್ಯಾಪ್ಸುಲ್​ ಗೊತ್ತುಪಡಿಸಿದ ‘ಕರ್ಮನ್​’ ಬಾಹ್ಯಾಕಾಶ ರೇಖೆಯನ್ನು (62 ಮೈಲಿ) ಮೀರಿಸಿದೆ. ಆದರೆ ವರ್ಜಿನ್ ಗ್ಯಾಲಕ್ಸಿಯ ಗರಿಷ್ಠ ಎತ್ತರವು 55 ಮೈಲಿ ಮೀರಿದೆ. ಯುರೋಪಿನ ಅಂತಾರಾಷ್ಟ್ರೀಯ ಏರೋನಾಟಿಕ್ ಮತ್ತು ಗಗನಯಾತ್ರಿ ಒಕ್ಕೂಟಗಳು ಕರ್ಮನ್ ರೇಖೆಯನ್ನು ಮೇಲಿನ ವಾತಾವರಣ ಮತ್ತು ಬಾಹ್ಯಾಕಾಶದ ನಡುವಿನ ಅಧಿಕೃತ ಗಡಿಯೆಂದು ಗುರುತಿಸಿದೆ. ನಾಸಾ, ವಾಯುಪಡೆ, ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಮತ್ತು ಕೆಲವು ಖಗೋಳ ಭೌತವಿಜ್ಞಾನಿಗಳು ಕನಿಷ್ಠ 50 ಮೈಲಿ (80 ಕಿಲೋಮೀಟರ್) ಎತ್ತರದಲ್ಲಿ ಮಾತ್ರ ಹಾರಾಟ ನಡೆಸುತ್ತಾರೆ.

ಬ್ಲೂ ಒರಿಜಿನ್​​ ಫ್ಲೈಟ್​ಗಳು ಭೂಮಿಗೆ ತಲುಪಲು 10 ನಿಮಿಷ ತೆಗೆದುಕೊಂಡರೆ, ವರ್ಜಿನ್ ಗ್ಯಾಲಕ್ಟಿಕ್ ಬಾಹ್ಯಾಕಾಶ ವಿಮಾನವು 14 ರಿಂದ 17 ನಿಮಿಷ ತೆಗೆದುಕೊಳ್ಳುತ್ತದೆ.

ABOUT THE AUTHOR

...view details