ಕರ್ನಾಟಕ

karnataka

ETV Bharat / international

ಆಫ್ಘಾನ್‌ ನಿರಾಶ್ರಿತರಿಗೆ ನೆರವಿನ ಹಸ್ತ : 10 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ ಅಮೆರಿಕ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಟ್ಟಹಾಸಕ್ಕೆ ನಲುಗಿ ನಿರಾಶ್ರಿತರಾಗಿರುವ ಹಾಗೂ ವಲಸಿಗರಿಗೆ ಅಮೆರಿಕ ನೆರವಿನ ಹಸ್ತ ಚಾಚಿದ್ದು, ತುರ್ತು ಪರಿಹಾರವಾಗಿ 100 ಮಿಲಿಯನ್‌ ಡಾಲರ್‌ (10 ಕೋಟಿ ರೂ.) ಆರ್ಥಿಕ ನೆರವು ಘೋಷಿಸಿದೆ.

Biden announces USD 100 million in emergency aid for Afghan refugees
ಆಫ್ಘಾನ್‌ ನಿರಾಶ್ರಿತರಿಗೆ ನೆರವಿನ ಹಸ್ತ; 10 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ ಅಮೆರಿಕ

By

Published : Jul 24, 2021, 10:11 PM IST

ವಾಷಿಂಗ್ಟನ್‌(ಯುಎಸ್‌): ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ನಡೆಸುತ್ತಿರುವ ಹಿಂಸಾಚಾರಕ್ಕೆ ಮನಮಿಡಿದಿರುವ ಅಮೆರಿಕ, ನಿರಾಶ್ರಿತರು ಹಾಗೂ ವಲಸಿಗರಿಗೆ ತುರ್ತು ಪರಿಹಾರವಾಗಿ 100 ಮಿಲಿಯನ್‌ ಡಾಲರ್‌ (10 ಕೋಟಿ ರೂ.) ಅನ್ನು ಅಧ್ಯಕ್ಷ ಜೋ ಬೈಡನ್‌ ಘೋಷಿಸಿರುವುದಾಗಿ ವೈಟ್‌ಹೌಸ್‌ ತಿಳಿಸಿದೆ.

ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಸಂಘಟನೆಗಳ ಮೂಲಕ ನೆರವು ನೀಡಲಾಗುತ್ತದೆ ಎಂದು ಹೇಳಿದೆ. ಸರ್ಕಾರೇತರ ಸಂಸ್ಥೆಗಳು, ಸರ್ಕಾರ, ಯುಎಸ್‌ ಸರ್ಕಾರ ಹಾಗೂ ಏಜೆನ್ಸಿಗಳ ಮೂಲಕ ಈ ಆರ್ಥಿಕ ನೆರವು ಸಿಗಲಿದೆ. ನಿರಾಶ್ರಿತರ ಮತ್ತು ವಲಸಿಗರ ತುರ್ತು ಪರಿಹಾರ ನಿಧಿಯಿಂದ ಹಣವನ್ನು ನೀಡಲಾಗುತ್ತದೆ. ವಿಶೇಷ ವಲಸಿಗ ಮೀಸಾ (ಎಸ್‌ಐವಿ)ಗೆ ಅರ್ಜಿ ಸಲ್ಲಿಸಿರುವವರೂ ಸೌಲಭ್ಯದಡಿ ಬರುತ್ತಾರೆ.

ಇದನ್ನೂ ಓದಿ: ಜುಲೈ 27ಕ್ಕೆ ಭಾರತಕ್ಕೆ ಬರ್ತಿದ್ದಾರೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್‌

ಆಫ್ಘಾನಿಸ್ತಾನದಲ್ಲಿ ಯುದ್ಧದಂತಹ ವಾತಾವರಣ ನಿರ್ಮಾಣವಾದ ಸಂದರ್ಭದಲ್ಲಿ ಯುಎಸ್‌ ಪರ ಕೆಲಸ ಮಾಡುತ್ತಿರುವ 20,000 ಆಫ್ಘನ್ನರು ಮತ್ತು ಈಗ ತಾಲಿಬಾನ್ ದಂಗೆಕೋರರಿಂದ ಪ್ರತೀಕಾರಕ್ಕೆ ಹೆದರುವವರು ಇದರ ಅಡಿಯಲ್ಲಿ ಬರಲಿದ್ದಾರೆ. ಯುದ್ಧದ ಪರಿಸ್ಥಿತಿಯ ಸಮಯದಲ್ಲಿ ಅಮೆರಿಕ ಸೇನೆಗೆ ನೆರವು ನೀಡಿ ತಾಲಿಬಾನ್‌ಗಳಿಂದ ಬೆದರಿಕೆ ಎದುರಿಸುತ್ತಿರುವ ಆಫ್ಘಾನಿಸ್ತಾನದವರಿಗೆ ನೆರವು ನೀಡುವುದಾಗಿ ಇತ್ತೀಚೆಗೆ ಅಮೆರಿಕ ಘೋಷಿಸಿತ್ತು.

ಅಧ್ಯಕ್ಷ ಜೋ ಬೈಡನ್‌ ಅವರ ನಿರ್ದೇಶನದ ಮೇರೆಗೆ, ಅಫ್ಘಾನಿಸ್ತಾನದಲ್ಲಿ ನಮ್ಮ ಪಾಲುದಾರರನ್ನು ಬೆಂಬಲಿಸಿದ ಮತ್ತು ಎಸ್‌ಐವಿ ಅರ್ಜಿ ಹಾಕಿರುವ ಆಸಕ್ತ ಹಾಗೂ ಅರ್ಹ ಅಫ್ಘಾನ್‌ ಪ್ರಜೆಗಳು ಮತ್ತವರ ಕುಟುಂಬಗಳನ್ನು ಸ್ಥಳಾಂತರಿಸಲು ಯುನೈಟೆಡ್ ಸ್ಟೇಟ್ಸ್ ಆಪರೇಷನ್ ಅಲೈಸ್ ರೆಫ್ಯೂಜ್ ಕಾರ್ಯಾಚರಣೆ ಆರಂಭಿದೆ.

ABOUT THE AUTHOR

...view details