ಕರ್ನಾಟಕ

karnataka

ETV Bharat / international

ಭೀಕರ ವ್ಯಾನ್ ಅಪಘಾತ: ನಾಲ್ವರು ಮಹಿಳೆಯರು ಸೇರಿ 12 ಮಂದಿ ಪ್ರಯಾಣಿಕರು ಸಾವು

ಮೆಕ್ಸಿಕೋದ ಜಲಿಸ್ಕೋ ರಾಜ್ಯದಲ್ಲಿ ಸಂಭವಿಸಿದ ವ್ಯಾನ್ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ.

By

Published : Jan 30, 2022, 6:04 AM IST

At least 12 dead in highway accident in Mexico
ಭೀಕರ ವ್ಯಾನ್ ಅಪಘಾತ

ಮೆಕ್ಸಿಕೋ ಸಿಟಿ (ಮೆಕ್ಸಿಕೋ):ಮೆಕ್ಸಿಕೋದ ಜಲಿಸ್ಕೋ ರಾಜ್ಯದಲ್ಲಿ ಶನಿವಾರ ಸಂಭವಿಸಿದ ಪ್ರಯಾಣಿಕರ ವ್ಯಾನ್ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದು, ಇತರ 11 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಾಹನದಲ್ಲಿ ಪ್ರವಾಸಿಗರು ತೆರಳುತ್ತಿದ್ದರು. ಲಾಗೋಸ್ ಡಿ ಮೊರೆನೊದ ಲಿಯಾನ್-ಅಗ್ವಾಸ್ಕಾಲಿಯೆಂಟೆಸ್ ಹೆದ್ದಾರಿಯಲ್ಲಿ ವ್ಯಾನ್ ಪಲ್ಟಿಯಾಗಿದೆ ಎಂದು ಜಲಿಸ್ಕೊ ​​ಸಿವಿಲ್ ಪ್ರೊಟೆಕ್ಷನ್ ಮತ್ತು ಅಗ್ನಿಶಾಮಕ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ.

ಅಪಘಾತದಲ್ಲಿ ಎಂಟು ಮಂದಿ ಪುರುಷರು ಮತ್ತು ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅವರಲ್ಲಿ ಇಬ್ಬರು ಅಪ್ರಾಪ್ತರೂ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಲಿಸ್ಕೋದಲ್ಲಿ ಕಳೆದ ವರ್ಷ ಅಪಘಾತಗಳಿಂದಾಗಿ 1,015 ಸಾವು ಸಂಭವಿಸಿವೆ. ಇಂತಹ ಸಾವು ಪ್ರಕರಣಗಳಲ್ಲಿ ಜಲಿಸ್ಕೋ ರಾಜ್ಯವು ಮೆಕ್ಸಿಕೋದ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ರಿವಾಲ್ವಾರ್​ ತೋರಿಸಿ ಮಹಿಳಾ ಇನ್ಸ್​ಪೆಕ್ಟರ್​ ಮೇಲೆ ಬಿಜೆಪಿ ಮುಖಂಡನಿಂದ ಅತ್ಯಾಚಾರ

ABOUT THE AUTHOR

...view details