ಟೆಹರಾನ್(ಇರಾನ್): ಅಮೆರಿಕ ವಿರುದ್ಧ ಸಿಡಿದೆದ್ದಿರುವ ಇರಾನ್ 12ಕ್ಕೂ ಹೆಚ್ಚು ಕ್ಷಿಪಣಿಗಳನ್ನುಇರಾಕ್ನಲ್ಲಿರುವ ಅಮೆರಿಕ ಸೇನೆಯ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳ ಪ್ರಾಥಮಿಕ ವರದಿ ತಿಳಿಸಿದೆ.
ತನ್ನ ಸೇನಾ ನಾಯಕನನ್ನು ಕಳೆದುಕೊಂಡಿರುವ ಇರಾನ್, ಅಮೆರಿಕದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಇಂದು ಬೆಳಗ್ಗೆ 5.30ರ ಸುಮಾರಿಗೆ ಇರಾಕ್ನಲ್ಲಿರುವ ಅಮೆರಿಕ ಸೇನೆಯ ಮೇಲೆ ದಾಳಿ ನಡೆಸಿದ್ದು, ಆ ಸಮಯದಲ್ಲಿ ಯಾವುದೇ ಸಾವು ನೋವುಗಳ ಸಂಭವಿಸಿಲ್ಲ ಎಂದು ವರದಿಯಾಗಿತ್ತಾದರೂ ನಂತರದಲ್ಲಿ 80ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ದಾಳಿ ಹಿನ್ನೆಲೆಯಲ್ಲೇ ಅಮೆರಿಕಾದಿಂದ ಇರಾನ್ಗೆ ಸಂಚರಿಸುವ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿಲಾಗಿದ್ದು ಹಾಗೂ ಅಮೆರಿಕದಲ್ಲಿರುವ ಶ್ವೇತಭವನಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಮತ್ತೊಂದೆಡೆ ಭಾರತ ಕೂಡಾ ಇರಾಕ್ ಹಾಗೂ ಇರಾನ್ ಮೇಲೆ ವಿಮಾನಗಳ ಹಾರಾಟ ನಡೆಸದಂತೆ ಭಾರತೀಯ ವಾಯುಯಾನ ಇಲಾಖೆ ಆದೇಶ ನೀಡಿದೆ.