ಕೈರೋ, ಈಜಿಪ್ಟ್ :ಲಿಬಿಯಾ ಸರ್ವಾಧಿಕಾರಿಯಾಗಿದ್ದ ಮುಅಮ್ಮರ್ ಗಡಾಫಿ ( Moammar Gadhafi) ಅವರ ಪುತ್ರ ಸೈಫ್ ಅಲ್-ಇಸ್ಲಾಂ ಮುಂದಿನ ತಿಂಗಳು ನಡೆಯಲಿರುವ ದೇಶದ ಅಧ್ಯಕ್ಷೀಯ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಭಾನುವಾರ ಘೋಷಿಸಿದ್ದಾರೆ ಎಂದು ಲಿಬಿಯಾದ ಚುನಾವಣಾ ಸಂಸ್ಥೆ (Libya's election agency) ತಿಳಿಸಿದೆ.
ಸೈಫ್ ಅಲ್-ಇಸ್ಲಾಂ (Seif al-Islam) ಅವರು ತಮ್ಮ ಉಮೇದುವಾರಿಕೆ ಪತ್ರವನ್ನು ದಕ್ಷಿಣದ ಸಬಾಹ್ ಪಟ್ಟಣದಲ್ಲಿ ಸಲ್ಲಿಸಿದ್ದಾರೆ ಎಂದು ಚುನಾವಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಉಮೇದುವಾರಿಕೆ ಸಲ್ಲಿಕೆ ನಂತರ ಮಾತನಾಡಿರುವ ಸೈಫ್ ಅಲ್-ಇಸ್ಲಾಂ, ದೇಶದ ಭವಿಷ್ಯಕ್ಕಾಗಿ ದೇವರು ಸರಿಯಾದ ಮಾರ್ಗವನ್ನು ನಿರ್ಧರಿಸುತ್ತಾನೆ ಎಂದಿದ್ದಾರೆ.
ಈ ವಿಡಿಯೋವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ನಾಮಿನೇಷನ್ ಹಾಕುವ ವೇಳೆಯಲ್ಲಿ ಸೈಫ್ ಅಲ್-ಇಸ್ಲಾಂ ಲಿಬಿಯಾದ ಸಾಂಪ್ರದಾಯಿಕ ನಿಲುವಂಗಿ ಮತ್ತು ಪೇಟ ಮತ್ತು ಕನ್ನಡಕವನ್ನು ಧರಿಸಿದ್ದರು.