ಕರ್ನಾಟಕ

karnataka

ETV Bharat / international

ಮೊಜಾಂಬಿಕ್​ ಸೈಕ್ಲೋನ್​ಗೆ ಸಾವಿರ ಬಲಿ... ಸಹೋದರನ ಕೂಗಿಗೆ ಓಗೊಟ್ಟು ನೆರವಿನ ಹಸ್ತ ಚಾಚಿದ ಭಾರತ - ಪೂರ್ವ ಆಫ್ರಿಕಾ

ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಅಗತ್ಯವಿರುವ ಮೀನುಗಾರಿಕಾ ದೋಣಿಗಳನ್ನು ಭಾರತವು ಒದಗಿಸುತ್ತಿದ್ದು, ಅಗತ್ಯ ಬಿದ್ದರೆ ಹೆಲಿಕಾಪ್ಟರ್​ ನೆರವನ್ನೂ ಕೂಡ ಕೊಡುವುದಾಗಿ ಹೇಳಿದೆ.

ಇಡಾಯ್​ ಚಂಡಮಾರುತ

By

Published : Mar 20, 2019, 7:57 AM IST

ಮಪುಟೊ: ಜಲಚರ ತಿನಿಸುಗಳಿಗೆ ಖ್ಯಾತಿ ಪಡೆದಿರುವ ಪೂರ್ವ ಆಫ್ರಿಕಾದ ಮೊಜಾಂಬಿಕ್​ ದೇಶವು ಇಡಾಯ್​ ಚಂಡಮಾರುತಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೆರೆಯ ದೇಶದ ಕೂಗಿಗೆ ಭಾರತ ಸ್ಪಂದಿಸಿದೆ.

ಮೊಜಾಂಬಿಕ್​ನ ಬೈರಾ ರಾಜ್ಯವು ಸಂಪೂರ್ಣ ನುಚ್ಚು ನೂರಾಗಿದೆ. ಈವರೆಗೆ 84 ಜನರ ಸಾವಿನ ಸುದ್ದಿಯಷ್ಟೇ ಖಚಿತಪಟ್ಟಿದ್ದು ಅಲ್ಲಿನ ಅಧ್ಯಕ್ಷರು ಸಾವಿರ ಮಂದಿ ಸಾವಿಗೀಡಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇಡಾಯ್​ ಚಂಡಮಾರುತ

ನೆರವು ಬೇಕು ಎಂಬ ಪೂರ್ವ ಆಫ್ರಿಕಾ ದೇಶದ ಕರೆಗೆ ಓಗೊಟ್ಟ ಭಾರತ ತನ್ನ ನೌಕಾಪಡೆಯನ್ನು ಬಳಸಿ ಮೊಜಾಂಬಿಕ್​ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸಲು ಮುಂದಾಗಿದೆ. ಬೈರಾ ಪಟ್ಟಣದಲ್ಲಿ ಅಪಾಯಕ್ಕೆ ಸಿಲುಕಿದ್ದ ಐದು ಸಾವಿರ ಮಂದಿಯನ್ನು ತನ್ನ ನೌಕೆ ಮೂಲಕ ಭಾರತ ರಕ್ಷಿಸಿದೆ.

ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಅಗತ್ಯವಿರುವ ಮೀನುಗಾರಿಕಾ ದೋಣಿಗಳನ್ನು ಭಾರತವು ಒದಗಿಸುತ್ತಿದ್ದು, ಅಗತ್ಯ ಬಿದ್ದರೆ ಹೆಲಿಕಾಪ್ಟರ್​ ನೆರವನ್ನೂ ಕೂಡ ಕೊಡುವುದಾಗಿ ಹೇಳಿದೆ.

ಇಡಾಯ್​ ಚಂಡಮಾರುತ

ದಕ್ಷಿಣ ಹಿಂದೂಮಹಾ ಸಾಗರದತ್ತ ಹೊರಟಿದ್ದ ಭಾರತೀಯ ನೌಕಾಪಡೆಯ ಸುಜಾತಾ, ಸಾರಥಿ ಹಾಗೂ ಶಾರ್ದುಲ್​ ನೌಕೆಗಳ ಮಾರ್ಗ ಬದಲಿಸಿ ಮೊಜಾಂಬಿಕ್​ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ABOUT THE AUTHOR

...view details