ಕರ್ನಾಟಕ

karnataka

By

Published : Jul 31, 2022, 12:04 PM IST

Updated : Jul 31, 2022, 12:36 PM IST

ETV Bharat / entertainment

'ನಿಮ್ಮ ಪ್ರೀತಿ ಗಡಿಯನ್ನು ಮೀರಿದೆ..' ಇಟಲಿಯಲ್ಲಿ ಫ್ಯಾನ್ಸ್ ಜತೆ ನಟ ಯಶ್ ದಂಪತಿ

ಕನ್ನಡದ ನಟ ಯಶ್ ಅವರು ಈಗ ಜಗತ್ತಿನ ಎಲ್ಲಿಯೇ ಹೋದರು ಅವರನ್ನು ಸುತ್ತುವರೆದು ಪ್ರೀತಿಸುವ ಅಪಾರ ಅಭಿಮಾನಿ ಬಳಗವಿದೆ. ಇಟಲಿಯಲ್ಲಿ ಅಭಿಮಾನಿಗಳ ಜತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಇದೀಗ ಅವರು ಟ್ವೀಟ್ ಮಾಡಿದ್ದಾರೆ.

Yash Shares A Pic With Fans From Italy
ಇಟಲಿ ಫ್ಯಾನ್ಸ್ ಜತೆಗೆ ರಾಕಿಂಗ್ ಸ್ಟಾರ್ ಯಶ್ ದಂಪತಿ

ಕೆಜಿಎಫ್​​-2 ಭರ್ಜರಿ ಸಕ್ಸಸ್ ಬಳಿಕ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಜತೆ ಇದೀಗ ಇಟಲಿ ಟ್ರೀಪ್‌ ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳೀಗ ವೈರಲ್ ಆಗುತ್ತಿವೆ.

ಈ ಪೈಕಿ ಯಶ್ ಇಟಲಿ ಮತ್ತು ಬಾಂಗ್ಲಾ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿರುವ ಫೋಟೋ ಸದ್ದು ಮಾಡುತ್ತಿದೆ. ಈ ಫೋಟೋಗೆ, 'ಗಡಿಯಾಚೆಗೂ ಪ್ರೀತಿಸೋ ಅಭಿಮಾನಿಗಳಿಗಾಗಿ ನನ್ನ ತೋಳು ಕಾದಿರುತ್ತೆ' ಅನ್ನೋ ಅರ್ಥದಲ್ಲಿ ಕ್ಯಾಪ್ಶನ್ ಕೊಟ್ಟಿದ್ದಾರೆ.

"ನನ್ನ ಮೇಲಿನ ನಿಮ್ಮ ಪ್ರೀತಿ ಗಡಿಯನ್ನು ಮೀರಿದೆ. ಮುಕ್ತ ತೋಳುಗಳಿಂದ ನಾನು ಅದನ್ನು ಸ್ವೀಕರಿಸುತ್ತೇನೆ. ಇಟಲಿ ಹಾಗೂ ಬಾಂಗ್ಲಾದೇಶದ ಅಭಿಮಾನಿಗಳನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕೆಲಸ ಮುಗಿದ ನಂತರವೂ ನನಗಾಗಿ ಕಾದಿದ್ದಕ್ಕೆ ಧನ್ಯವಾದಗಳು" ಎಂದು ಯಶ್​​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಎಂಜಾಯ್​ ಮೂಡ್​ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್; ಮುಂದಿನ ಸಿನಿಮಾ ಬಗ್ಗೆ ಇನ್ನೂ ನಿಗೂಢ

Last Updated : Jul 31, 2022, 12:36 PM IST

ABOUT THE AUTHOR

...view details