ಹೈದರಾಬಾದ್ (ತೆಲಂಗಾಣ): ಲಲಿತ್ ಮೋದಿ ಅವರು ತಮ್ಮ ಹಾಗೂ ಸುಶ್ಮಿತಾ ಸೇನ್ ಮಧ್ಯದ ಸಂಬಂಧವನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಬಹಿರಂಗಗೊಳಿಸಿದ ನಂತರ ಈಗ, ಸುಶ್ಮಿತಾ ಸೇನ್ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಈ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತನ್ನ ಮಾಜಿ ಲವರ್ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದನ್ನು ಒಂದು ರೀತಿಯಲ್ಲಿ ರೋಹ್ಮನ್ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.
2018ರಲ್ಲಿ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಮಾಡೆಲ್ ರೋಹ್ಮನ್ ಶಾಲ್ ಜೊತೆಗೆ ಸುಶ್ಮಿತಾ ಡೇಟಿಂಗ್ ಮಾಡುತ್ತಿದ್ದರು. ಕಳೆದ ವರ್ಷ ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಇಬ್ಬರೂ ಹೇಳಿಕೊಂಡಿದ್ದರು. ಆದರೆ ಇಬ್ಬರೂ ಬೇರೆಯಾದ ನಂತರವೂ ಮಧುರವಾದ ಸಂಬಂಧ ಉಳಿಸಿಕೊಂಡಿದ್ದಾರೆ. ಈಗ ಲಲಿತ್ ಮೋದಿಯೊಂದಿಗೆ ಡೇಟಿಂಗ್ ಮಾಡಿದರೂ ರೋಹ್ಮನ್ ಸುಶ್ಮಿತಾರನ್ನು ಸಮರ್ಥಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.
ಡಿಜಿಟಲ್ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ರೋಹ್ಮನ್, ಸುಶ್ಮಿತಾರ ಆಯ್ಕೆಯ ಬಗ್ಗೆ ಸಂಶಯ ಪಡಲು ಕಾರಣಗಳಿಲ್ಲ ಎಂದು ಹೇಳಿದ್ದಾರೆ.
"ಅವರ ಖುಷಿಯಲ್ಲಿ ಖುಷಿ ಕಾಣೋಣ. ಪ್ರೀತಿ ಸುಂದರವಾಗಿದೆ. ಆಕೆ ಯಾರನ್ನಾದರೂ ಆಯ್ಕೆ ಮಾಡಿಕೊಂಡಿದ್ದಾಳೆಂದರೆ ಅವರು ಅದಕ್ಕೆ ಅರ್ಹರಾಗಿರುತ್ತಾರೆ. ಇಷ್ಟು ಮಾತ್ರ ನನಗೆ ಗೊತ್ತು" ಎಂದಿದ್ದಾರೆ ರೋಹ್ಮನ್.