ಕರ್ನಾಟಕ

karnataka

ETV Bharat / entertainment

ಹುಟ್ಟುಹಬ್ಬಕ್ಕೂ ಮುನ್ನ ಪತಿಯೊಂದಿಗೆ ಕಿರು ವಿಡಿಯೋ ಹಂಚಿಕೊಂಡ ಸೋನಂ ಕಪೂರ್ - ಬೇಬಿ ಬಂಪ್ ಫೋಟೋ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸೋನಂ ಕಪೂರ್ ನಾಳೆ ಬರ್ತ್​ಡೇ ಆಚರಿಸಿಕೊಳ್ಳಲಿದ್ದು, ಹುಟ್ಟುಹಬ್ಬಕ್ಕೂ ಮುನ್ನ ಪತಿ ಆನಂದ್ ಅಹುಜಾ ಅವರೊಂದಿಗೆ ಸುಂದರವಾದ ಕಿರು ವಿಡಿಯೋವೊಂದನ್ನ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸೋನಂ ಕಪೂರ್
ಸೋನಂ ಕಪೂರ್

By

Published : Jun 8, 2022, 11:23 AM IST

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅನಿಲ್ ಕಪೂರ್ ಮಗಳು ಮತ್ತು ನಟಿ ಸೋನಂ ಕಪೂರ್ ಮದುವೆಯಾಗಿ 4 ವರ್ಷಗಳ ನಂತರ ಮೊದಲ ಬಾರಿಗೆ ತಾಯಿಯಾಗಲಿದ್ದಾರೆ. ಪತಿ ಆನಂದ್ ಅಹುಜಾ ಅವರೊಂದಿಗೆ ಇಟಲಿಯಲ್ಲಿ 'ಬೇಬಿಮೂನ್' ಎಂಜಾಯ್‌ ಮಾಡಿದ ಸೋನಂ, ಇದೀಗ ಮನೆಗೆ ಮರಳಿದ್ದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

1985 ರ ಜೂನ್ 9 ರಂದು ಜನಿಸಿದ ನಟಿ ಸೋನಂ ಕಪೂರ್, 'ಸಾವರಿಯಾ' ಚಿತ್ರದ ಮೂಲಕ ನಾಯಕಿಯಾಗಿ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ನಾಳೆ ಜನ್ಮದಿನ ಆಚರಿಸಿಕೊಳ್ಳಲಿರುವ ನಟಿ, ಹುಟ್ಟುಹಬ್ಬಕ್ಕೂ ಮುನ್ನ ಪತಿ ಆನಂದ್ ಅಹುಜಾ ಅವರೊಂದಿಗೆ ಸುಂದರವಾದ ಕಿರು ವಿಡಿಯೋವೊಂದನ್ನ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಸೋನಂ ವಿಡಿಯೋಗೆ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿರುವ ಅಭಿಮಾನಿಗಳು, ಹಾರ್ಟ್ ಎಮೋಜಿಗಳೊಂದಿಗೆ ಬರ್ತ್​ಡೇಗೆ ಶುಭ ಕೋರುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ, ಕೆಲ ದಿನಗಳ ಹಿಂದಷ್ಟೇ ಬೇಬಿ ಬಂಪ್ ಫೋಟೋಗಳನ್ನ ಶೇರ್​ ಮಾಡಿದ್ದರು. ಸೋನಂ ಮತ್ತು ಆನಂದ್ ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 8 ಮೇ 2018 ರಂದು ಪಂಜಾಬಿ ಸಂಪ್ರದಾಯದ ಪ್ರಕಾರ ಮುಂಬೈನಲ್ಲಿ ವಿವಾಹವಾದರು. ಸದ್ಯಕ್ಕೆ ಮಗುವಿನ ನಿರೀಕ್ಷೆಯಲ್ಲಿರುವ ನಟಿ, 'ಬ್ಲೈಂಡ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಆದರೆ, ಒಂದೂವರೆ ವರ್ಷದ ಹಿಂದೆಯೇ ಚಿತ್ರ ಪೂರ್ಣಗೊಂಡಿದೆ.

ಇದನ್ನೂ ಓದಿ:ವಿಡಿಯೋ: ಗೋಲ್ಡನ್ ಕಲರ್ ಗೌನ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ

ABOUT THE AUTHOR

...view details