ಕರ್ನಾಟಕ

karnataka

ETV Bharat / entertainment

ಹುಟ್ಟು ಹಬ್ಬದ ಸಂಭ್ರಮದಲ್ಲಿ 'ಅಭಿನಯ ಚಕ್ರವರ್ತಿ': ನೆಚ್ಚಿನ 'ನಲ್ಲ'ನಿಗೆ ಪತ್ನಿಯಿಂದ ಸ್ಪೆಷಲ್ ಸರ್‌ಪ್ರೈಸ್! - ಸುದೀಪ್ ಲೇಟೆಸ್ಟ್​ ನ್ಯೂಸ್​

Kichcha Sudeep Birthday: ಸುದೀಪ್ ಪತ್ನಿ ಪ್ರಿಯಾ ಡ್ರೋಣ್ ಲೈಟಿಂಗ್ ಮೂಲಕ ಪತಿಯ ಭಾವಚಿತ್ರಗಳನ್ನ ಪ್ರದರ್ಶನ ಮಾಡುವ ಮೂಲಕ ವಿಶೇಷವಾಗಿ ವಿಶ್ ಮಾಡಿದರು.

Kichcha Sudeep Birthday
'ಕಿಚ್ಚ' ಸುದೀಪ್ ಹುಟ್ಟುಹಬ್ಬ ಆಚರಣೆ

By ETV Bharat Karnataka Team

Published : Sep 2, 2023, 11:08 AM IST

'ಕಿಚ್ಚ' ಸುದೀಪ್ ಹುಟ್ಟುಹಬ್ಬ ಆಚರಣೆ

ಕಿಚ್ಚ, ರನ್ನ, ಬಾದಾ ಶಾ, ಅಭಿನಯ ಚಕ್ರವರ್ತಿ, ಹೆಬ್ಬುಲಿ, ಪೈಲ್ವಾನ್ ಹೀಗೆ ಹಲವಾರು ಬಿರುದುಗಳನ್ನ ಹೊಂದಿರುವ ಏಕೈಕ ನಟ ಸುದೀಪ್. ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ನಟನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 50ನೇ ವಸಂತಕ್ಕೆ ಕಾಲಿಟ್ಟಿರುವ ಕಿಚ್ಚ ಸುದೀಪ್ ಈ ಬಾರಿಯ ಬರ್ತ್ ಡೇಯನ್ನ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ನಂದಿ ಲಿಂಕ್​ ಗ್ರೌಂಡ್‌ನಲ್ಲಿ ಸುದೀಪ್ ಬರ್ತ್‌ಡೇ ಸೆಲೆಬ್ರೇಷನ್:ಕಿಚ್ಚನ ಹುಟ್ಟು ಹಬ್ಬಕ್ಕೆ ಬ್ಯಾಕ್‌ ಟು ಬ್ಯಾಕ್ ಚಿತ್ರಗಳು ಅನೌನ್ಸ್ ಆಗುತ್ತಿದೆ. ಇದರ ಜತೆಗೆ ಸುದೀಪ್ 50ನೇ ವರ್ಷದ ಹುಟ್ಟು ಹಬ್ಬವನ್ನ ಸ್ಪೆಷಲ್​ ಆಗಿ ಮಾಡಲಾಗಿದೆ. ನಾಯಂಡನಹಳ್ಳಿ ಸಮೀಪ ಇರುವ ನಂದಿ ಲಿಂಕ್ ಗ್ರೌಂಡ್​ಗೆ ಸುಮಾರು 11 ಗಂಟೆಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್, ‌ಮಗಳು ಸಾನ್ವಿ ಸೇರಿದಂತೆ ಚಿತ್ರರಂಗದ ಗೆಳೆಯರು ಆಗಮಿಸಿದರು. ಅದ್ದೂರಿಯಾಗಿ ಹಾಕಲಾಗಿದ್ದ ಸ್ಟೇಜ್ ಮೇಲೆ ಕಿಚ್ಚ ಸುದೀಪ್ 12 ಗಂಟೆಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಸಂಭ್ರಮಿಸಿದರು. ಸುದೀಪ್ ಪತ್ನಿ ಪ್ರಿಯಾ, ಪುತ್ರಿ ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿ ಕೇಕ್ ತಿನ್ನಿಸಿ ಶುಭ ಕೋರಿದರು. ಸಾವಿರಾರು ಅಭಿಮಾನಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.

ಪತ್ನಿಯಿಂದ ಸ್ಪೆಷಲ್ ಸರ್‌ಪ್ರೈಸ್:ಸುದೀಪ್ ಪತ್ನಿ ಪ್ರಿಯಾ ಡ್ರೋಣ್ ಲೈಟಿಂಗ್ ಮೂಲಕ ಪತಿಯ ಭಾವಚಿತ್ರಗಳನ್ನ ಪ್ರದರ್ಶನ ಮಾಡುವ ಮೂಲಕ ವಿಶೇಷವಾಗಿ ವಿಶ್ ಮಾಡಿದರು. ಸಿನಿಮಾ ಜೊತೆ ಜೊತೆಗೆ ಕಿಚ್ಚ ಚಾರಿಟಬಲ್​ ಟ್ರಸ್ಟ್ ವತಿಯಿಂದ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಹುಟ್ಟು ಹಬ್ಬ ಆಚರಿಸಿಕೊಳ್ಳದೇ ದೂರ ಉಳಿದಿದ್ದ ಸುದೀಪ್ ಈ ವರ್ಷ ಅಭಿಮಾನಿಗಳ ಜತೆ ಕೇಕ್‌ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಇಂದು ಕೂಡ ಅವರು ಫ್ಯಾನ್ಸ್ ಜೊತೆ ಕಾಲ ಕಳೆಯಲಿದ್ದಾರೆ.

ಕಿಚ್ಚ ಸುದೀಪ್‌ ಕೇಕ್‌ ಕಟ್ ಮಾಡುವಾಗ ಮೊಬೈಲ್ ಟಾರ್ಚ್ ಆನ್ ಮಾಡಿದ ಸಾವಿರಾರು ಅಭಿಮಾನಿಗಳು ವಿಶೇಷ ರೀತಿಯಲ್ಲಿ ವಿಶ್ ಮಾಡಿದರು. ಅಭಿಮಾನಿಗಳ ಅಭಿಮಾನ ಕಂಡು ಸುದೀಪ್‌ ಸಂತಸ ಪಟ್ಟರು. ಸುದೀಪ್ ಅವರ 50ನೇ ಹುಟ್ಟು ಹಬ್ಬದ ಪ್ರಯುಕ್ತ ಪತ್ನಿ ಪ್ರಿಯಾ ನಂದಿ ಲಿಂಕ್​ ಗ್ರೌಂಡ್‌ನಲ್ಲಿ ಮಧ್ಯರಾತ್ರಿ ಸುದೀಪ್ ಹಾಗೂ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದರು. ಕಿಚ್ಚನ ಭಾವಚಿತ್ರಗಳನ್ನ ಡ್ರೋನ್‌ ಲೈಟ್ಸ್ ಸಹಾಯದಿಂದ ಆಗಸದಲ್ಲಿ ಚಿತ್ತಾರ ಬಿಡಿಸಲಾಗಿತ್ತು. ಆಗಸದಲ್ಲಿ ಡ್ರೋನ್‌ ಮೂಲಕ 'Happy Birthday Kichcha' ಎಂಬ ಸಾಲುಗಳು ಹಾಗೂ ಅವರ ಜನಪ್ರಿಯ ಪಾತ್ರಗಳ ಚಿತ್ತಾರ ಕಂಡು ಸುದೀಪ್ ಮತ್ತು ಅಭಿಮಾನಿಗಳು ಪುಳಕಿತರಾದರು.

ಅರಸು ಕ್ರಿಯೇಷನ್ಸ್ ಪ್ರೀತಿಯ ಉಡುಗೊರೆ:ನಟ ಕಿಚ್ಚ ಸುದೀಪ್ 50ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬಕ್ಕೆ ಅರಸು ಕ್ರಿಯೇಷನ್ಸ್ ಪ್ರೀತಿಯ ಉಡುಗೊರೆ ನೀಡಿದೆ. ಕಳೆದ ಎರಡು ವರ್ಷಗಳಿಂದ ಕನ್ನಡ ಮಾಧ್ಯಮದ ನಡುವೆ ಕೆಲಸ ಮಾಡುತ್ತಿರುವ ಹರೀಶ್ ಅರಸು ತಮ್ಮದೇ ಅರಸು ಕ್ರಿಯೇಷನ್ಸ್‌ನಡಿ ಸುದೀಪ್ ಹುಟ್ಟಹಬ್ಬಕ್ಕೆ, ಆಕಾಶದ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಎಂದು ನಾಮಕರಣ ಮಾಡಿದ್ದಾರೆ. ಈ ಜಗತ್ತಿನಲ್ಲಿರುವ ರತ್ನಗಳಲ್ಲಿ ನೀನೇ ಅತ್ಯಮೂಲ್ಯ. ಇಂದು ನಕ್ಷತ್ರ ಹುಟ್ಟಿದ ದಿನವನ್ನು ನಾವು ಆಚರಿಸುತ್ತೇವೆ. ಆದರೆ ಆಕಾಶದಲ್ಲಿ ಅಲ್ಲ, ಭೂಮಿಯಲ್ಲಿ ಎಂಬ ಸಂದೇಶದ ಮೂಲಕ ಮನದುಂಬಿ ಶುಭಾಶಯ ಕೋರಲಾಗಿದೆ.

ಇದನ್ನೂ ಓದಿ:ಅರಸು ಕ್ರಿಯೇಷನ್ಸ್ ವತಿಯಿಂದ ಸುದೀಪ್​ 50ನೇ ಜನ್ಮೋತ್ಸವಕ್ಕೆ ವಿಶೇಷ ಉಡುಗೊರೆ!

ABOUT THE AUTHOR

...view details