ಕರ್ನಾಟಕ

karnataka

ETV Bharat / entertainment

"ಲಲಿತ್​ ಮೋದಿಯನ್ನು ಅಳಿಯನನ್ನಾಗಿ ಒಪ್ಪಿಕೊಳ್ತೀರಾ": ಸುಶ್ಮಿತಾ ಸೇನ್​ರ ತಂದೆಯ ಉತ್ತರವಿದು

ಸುಶ್ಮಿತಾ ಸೇನ್​- ಲಲಿತ್​ ಮೋದಿಯ ಡೇಟಿಂಗ್​ ವಿಚಾರ- ತಮಗೆ ಈ ಬಗ್ಗೆ ಗೊತ್ತಿಲ್ಲ ಎಂದ ಸುಶ್ಮಿತಾ ಸೇನ್​ ಕುಟುಂಬಸ್ಥರು.

ಸುಶ್ಮಿತಾ ಸೇನ್​ರ ತಂದೆಯ ಉತ್ತರವಿದು
ಸುಶ್ಮಿತಾ ಸೇನ್​ರ ತಂದೆಯ ಉತ್ತರವಿದು

By

Published : Jul 16, 2022, 12:30 PM IST

ಮುಂಬೈ (ಮಹಾರಾಷ್ಟ್ರ):ಬಾಲಿವುಡ್​ ಮತ್ತು ಕ್ರಿಕೆಟ್​ ಸಂಬಂಧ ತುಂಬಾ ಹಳೆಯದು. ಇದೀಗ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್​ ಮತ್ತು ಐಪಿಎಲ್​ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಅವರ ಡೇಟಿಂಗ್ ಸುದ್ದಿ ಎರಡೂ ಕ್ಷೇತ್ರದಲ್ಲಿ ಗುಲ್ಲೆಬ್ಬಿಸಿದೆ. ಆದರೆ, ಸುಶ್ಮಿತಾ ಅವರ ಕುಟುಂಬಸ್ಥರು ಮಾತ್ರ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ನುಣುಚಿಕೊಂಡಿದ್ದಾರೆ.

2 ದಿನಗಳ ಹಿಂದಷ್ಟೇ ಲಲಿತ್ ಮೋದಿ ಅವರು ಟ್ವೀಟ್​ ಮಾಡಿ ತಾವು ಸುಂದರಿ ಸುಶ್ಮಿತಾ ಅವರೊಂದಿಗೆ ಡೇಟಿಂಗ್​ನಲ್ಲಿದ್ದೇನೆ ಎಂದು ಫೋಟೋ ಸಮೇತ ಘೋಷಿಸಿದ್ದರು. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಸುಶ್ಮಿತಾರ ತಂದೆ, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾದ ಶುಬೀರ್ ಸೇನ್ ಅವರು, ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

"ಈ ಬೆಳವಣಿಗೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸುಶ್ಮಿತಾ ಜತೆ ನಾನು ಕರೆ ಮಾಡಿ ಮಾತನಾಡಿದ್ದೇನೆ. ಈ ಬಗ್ಗೆ ಅವರು ನನಗೆ ಏನನ್ನೂ ಹೇಳಲಿಲ್ಲ. ಲಲಿತ್ ಮೋದಿ ಅವರ ಟ್ವೀಟ್ ಬಳಿಕ ಮಾಧ್ಯಮಗಳಿಂದ ನಾನು ವಿಷಯ ಅರಿತಿದ್ದೇನೆ" ಎಂದು ಹೇಳಿದರು.

"ಈಗ ಹರಡಿರುವ ಸುದ್ದಿ ನಿಜವಾದಲ್ಲಿ ಮಗಳ ಜೀವನದಲ್ಲಿ ಮಹತ್ವದ ತಿರುವು ಆಗಲಿದೆ. ಭವಿಷ್ಯದಲ್ಲಿ ಈ ಬಗ್ಗೆ ಎಲ್ಲರಿಗೂ ಮಾಹಿತಿ ಸಿಗಲಿದೆ. ಒಂದೂವರೆ ವರ್ಷದ ಹಿಂದೆ ಕುಟುಂಬ ಸಮಾರಂಭದಲ್ಲಿ ಲಲಿತ್​ ಮೋದಿ ಭಾಗವಹಿಸಿದ್ದರು. ಅದಾದ ಬಳಿಕ ಯಾವ ವಿಚಾರಗಳು ತಮಗೆ ಗೊತ್ತಿಲ್ಲ" ಎಂದರು.

ಓದಿ:ಆಪ್ತ ಸ್ನೇಹಿತ ಆದಿತ್ಯ ರಾಯ್ ಕಪೂರ್ ಕೆನ್ನೆಗೆ ಚುಂಬಿಸಿದ ರಣ್​ಬೀರ್ ಕಪೂರ್

ABOUT THE AUTHOR

...view details